ಸಕಾಲ ಸೇವೆಗಳನ್ನು ಹಳೆಯ ತಹಶೀಲ್ದಾರ್ ಕಛೇರಿಯಲ್ಲಿ ಆರಂಭಿಸಲು ಒತ್ತಾಯ

ಜಮಖಂಡಿ : ಸಾರ್ವಜನಿಕರ ಸಕಾಲ ಸೇವೆಗಳನ್ನು ಮತ್ತು ಉಪನೋಂದಣಿ ಕೆಲಸಗಳನ್ನು ಹಳೇ ತಹಸೀಲ್ದಾರ್ ಕಚೇರಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಅಟಲ್‌ಜೀ ಜನಸ್ನೇಹಿ ಕೇಂದ್ರ, ಆಹಾರ ವಿಭಾಗ ಮತ್ತು ಉಪ ನೋಂದಣಿ ಸೇವೆಗಳು ಸೇರಿದಂತೆ ಇತರ ಸಾರ್ವಜನಿಕರ ಕೆಲಸಗಳನ್ನು ಹಳೇ ತಸಿಲ್ದಾರ್ ಕಚೇರಿ ಕಟ್ಟಡದಲ್ಲಿ ಆರಂಭಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಉಪವಿಭಾಗಾಧಿಕಾರಿ ಇಕ್ರಮ್ ಅವರಿಗೆ ಮನವಿ ಪತ್ರ ಸಲ್ಲಸಿದರು.

ಸಾರ್ವಜನಿಕರ ಬೇಡಿಕೆಯಂತೆ ಹಳೆಯ ಕಛೇರಿಯಲ್ಲಿ ಸೇವೆಗಳನ್ನು ಒದಗಿಸುವ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಇಕ್ರಮ್ ಅವರು ಭರವಸೆ ನೀಡಿದರು.

-ರಮೇಶ್ ಬೀಳಗಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!