ಮಾನಸಿಕ ಅಸ್ವಸ್ಥನ ಸೇವೆ ಮಾಡಿ ಮಾನವೀಯತೆ ತೋರಿದ ಆಟೋ ಚಾಲಕರು

ಜಮಖಂಡಿ : ಪಟ್ಟಣದ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನ ಕರೆದುಕೊಂಡು ಹೋಗಿ ಶುಭ್ರಗೊಳಿಸಿ ಆತನ ಸೇವೆ ಮಾಡುವ ಮೂಲಕ ಆಟೋ ಚಾಲಕರು ಮಾನವೀಯತೆ ತೋರಿಸಿದ್ದಾರೆ.

ಪಟ್ಟಣದಲ್ಲಿ ಮಾಮೂ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಬಂದೇನವಾಜ್ ಗಲಗಲಿ ಎಂಬುವರು ಅಸ್ವಸ್ಥನ ಸೇವೆಗೆ ಮುಂದಾದ ಆಟೋ ಚಾಲಕ.

ಬಹಳ ದಿನಗಳಿಂದ ಅಡ್ಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕಂಡು ಮರುಗಿದ ಮಾಮು ಆತನನ್ನು ಕರೆದುಕೊಂಡು ಹೋಗಿ ಕೂದಲಿನ ಕಟಿಂಗ್ ಮಾಡಿಸಿ, ಸ್ನಾನ ಮಾಡಿಸಿ ಬಳಿಕ ಮೈಕೈಗೆ ಆಗಿದ್ದ ಗಾಯಗಳಿಗೆ ಚಿಕಿತ್ಸೆ ಕೊಡಿಸುವ ಮೂಲಕ ಇಂದು ಎಲ್ಲರೂ ಮೆಚ್ಚುವಂಥ ಕೆಲಸ ಮಾಡಿದ್ದಾರೆ. ಇದಕ್ಕೆ ಇತರ ಆಟೋ ಚಾಲಕರು ಸಹ ಸಾಥ್ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಅಸ್ವಸ್ಥನಿಗೆ ಊಟೋಪಚಾರವನ್ನೂ ಸಹ ಕೊಡಿಸಿ ಮಾನವೀಯತೆಯ ಪಾಠ ಮಾಡಿದ್ದಾರೆ‌.

ಆಟೋಚಾಲಕ ಬಂದೇನವಾಜ್ ಅವರ ಈ ಕಾರ್ಯಕ್ಕೆ ಪಟ್ಟಣದ ಸಮಸ್ತ ಜನತೆ ಅಭಿನಂದನೆ ಸಲ್ಲಸಿದ್ದಾರೆ.

-ರಮೇಶ ಬೀಳಗಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!