ಅತೃಪ್ತರೆಲ್ಲಾ ಸಗಣಿ ತಿಂದು ಮುಂಬೈಗೆ ಹೋಗಿದ್ದಾರೆ : ಶಾಮನೂರು ಗರಂ

ದಾವಣಗೆರೆ : ಬಿಜೆಪಿಯವರು ಹಾರ್ಸ್ ಟ್ರೇಡಿಂಗ್ ಮಾಡಿದ್ದಾರೆ. ಅತೃಪ್ತರೆಲ್ಲಾ ಸಗಣಿ ತಿಂದು ಮುಂಬೈಗೆ ಹೋಗಿದ್ದಾರೆ. ಅವರ್ಯಾರು ವಾಪಾಸ್ ಬರೋಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು ಅತೃಪ್ತರ ವಿರುದ್ಧ ಗರಂ ಆಗಿದ್ದರು. ಒಬ್ಬೊಬ್ಬ ಶಾಸಕರಿಗೂ 25 ರಿಂದ 30 ಕೋಟಿ ಕೊಟ್ಟಿದ್ದಾರೆ ಅಂತ ನೆನ್ನೆ ಸದನದಲ್ಲೆ ಹೇಳಿದ್ದೇವೆ. ಅಲ್ಲದೇ ಹೋದವರಿಗೆಲ್ಲಾ ಮಂತ್ರಿಗಿರಿ ಕೊಡೋಕೆ ಆಗುತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಅಳಿವು ಉಳಿವು ಸೋಮವಾರ ತಿಳಿಯುತ್ತೆ. ಬಿಜೆಪಿ ಸರ್ಕಾರ ಬಂದರೂ ಬಹಳ ದಿನ ಉಳಿಯಲ್ಲ. ನನ್ನನ್ನು ಯಾರೂ ರೆಸಾರ್ಟ್ ಗೆ ಕರೆದಿಲ್ಲ. ನಾನು ಹೋಗೋಲ್ಲ ಅಂತ ಗೊತ್ತು ಅದಕ್ಕೆ ನನ್ನನ್ನು ಕರೆಯೋದಿಲ್ಲ ಎಂದು ಹೇಳಿದ ಅವರು ರಾಜ್ಯಪಾಲರು ಸದನದ ನಿರ್ಣಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬ ನಿಯಮವಿದೆ ಎಂದರು.

-ಕರಿಬಸವರಾಜು, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!