ಪ್ರತ್ಯೇಕ ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ

ಸಿಂದಗಿ : ಹಣ್ಣು, ತರಕಾರಿ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ನಿರ್ಮಾಣ ಸಂಬಂಧದ ಕೂಗು ಮತ್ತೆ ಕೇಳಿ ಬಂದಿದ್ದು, ಬೀದಿ ಬದಿ ವ್ಯಾಪಾರಿಗಳು ಇಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಂದು ವ್ಯಾಪಾರ ಬಂದ್ ಮಾಡಿ ರಸ್ತೆಗಿಳಿದ ಬೀದಿ ಬದಿ ವ್ಯಾಪಾರಸ್ಥರು ಪ್ರತ್ಯೇಕ ಮಾರುಕಟ್ಟೆ ನಿರ್ಮಿಸದಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಣ್ಣು ತರಕಾರಿಯ ಬಿಸಿ ತಟ್ಟಲಿದೆ.

ಸಿಂದಗಿ ಪಟ್ಟಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ಹಣ್ಣು,ತರಕಾರಿಗಳ ಬಿಸಿ ತಟ್ಟಿದೆ ಅನಿರ್ದಿಷ್ಟಾವಧಿ ಪ್ರತಿಭಟನಾ ಮೆರವಣಿಗೆ ನಡೆಸಲು ವ್ಯಾಪಾರಸ್ಥರು ಮುಂದಾಗಿದ್ದಾರೆ.

ಈ ಹಿಂದೆಯೇ ಎರಡ್ಮೂರು ಕಡೆ ಜಾಗ ಗುರುತಿಸಲಾಗಿದ್ದರೂ ಕೂಡ ಯಾವುದಕ್ಕೂ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಹಿಂದಿನ ಶಾಸಕರಿಗೆ, ಈಗಿರುವ ಸಚಿವರಿಗೂ ಮನವಿ ಮಾಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ತುಂಬಾ ಸಣ್ಣದಾದ ಜಾಗದಲ್ಲಿ ತರಕಾರಿ, ಹಣ್ಣುಗಳನ್ನ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಇದರ ಸುತ್ತಮುತ್ತ ಇತರೆ ಅಂಗಡಿಗಳು, ಶಾಲೆಗಳಿವೆ. ಬೃಹತ್ ಚರಂಡಿ ಅಲ್ಲದೇ ಸಾರ್ವಜನಿಕ ಶೌಚಾಲಾಯವಿದೆ. ಇದರಿಂದಾಗಿ ಇಡೀ ಜಾಗ ಕೊಳಚೆಯಿಂದ ಕೂಡಿದೆ. ಮಳೆಯಾದಾಗ ಈ ಪ್ರದೇಶ ಸಂಪೂರ್ಣ ಕೆಸರಿನಿಂದ ಕೂಡುತ್ತದೆ. ಅದೇ ಕೊಳಚೆ ನೀರಿನಲ್ಲಿ ವ್ಯಾಪಾರ ಮಾಡುವ ದುಸ್ಥಿತಿ ನಮಗೆ ಬಂದಿದೆ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು. ಶೀಘ್ರದಲ್ಲಿ ಪ್ರತ್ಯೇಕ ಮಾರುಕಟ್ಟೆ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

-ಅಂಬರೀಶ್.ಎಸ್.ಎಸ್, ದಿ ನ್ಯೂಸ್ 24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!