ಶಾಸಕ ಶಂಕರ್‌ರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮಾಜಿ ಸಿಎಂ ಸಿದ್ದು ನಿಯೋಗ ದೂರು

ಬೆಂಗಳೂರು : ರಾಣಿಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಲ್ಲಿ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿ ಬಳಿಕ ಕಾಂಗ್ರೆಸ್‌ಗೆ ಸೇರಿದ್ದ ಶಾಸಕ ಆರ್.ಶಂಕರ್ ಅವರ ಶಾಸಕ ಸ್ಥಾನ‌ ಅನರ್ಹಗೊಳಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಸ್ಪೀಕರ್ ರಮೇಶ್‌ಕುಮಾರ್ ಅವರ ಕಛೇರಿಗೆ ತೆರಳಿದ ಸಿದ್ದರಾಮಯ್ಯ ನಿಯೋಗ ಆರ್.ಶಂಕರ್ ಅವರನ್ನು ಅನರ್ಹ ಮಾಡುವಂತೆ ದೂರು ನೀಡಿದ್ದಾರೆ. ಕೆಪಿಜೆಪಿ ಪಕ್ಷದ ಶಾಸಕರಾಗಿದ್ದ ಆರ್.ಶಂಕರ್ ಸಚಿವರಾದ ಬಳಿಕ ಅವರ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವಂತೆ ಕೋರಿ ಪತ್ರ ನೀಡಿದ್ದು. ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.‌ ಹಾಗಾಗಿ ಅವರನ್ನು ಅನರ್ಹಗೊಳಿಸುವಂತೆ ದೂರು ನೀಡಿದ್ದಾರೆ.

ಅಲ್ಲದೇ ಶಾಸಕರುಗಳಾದ ರಮೇಶ ಜಾರಕಿಹೊಳಿ ಹಾಗೂ ಮಹೇಶ್ ಕುಮಠಳ್ಳಿ ಇಬ್ಬರನ್ನು ಸಹ ಅನರ್ಹಗೊಳಿಸುವಂತೆ ದೂ ನೀಡಿದ್ದಾರೆ. ಸಿದ್ದರಾಮಯ್ಯ ದೂರಿನ ಹಿನ್ನಲೆ ಇಂದು ಸಂಜೆಯೊಳಗೆ ಸ್ಪೀಕರ್ ರಮೇಶ್‌ಕುಮಾರ್ ಅವರ ಆದೇಶ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Share Post

Leave a Reply

Your email address will not be published. Required fields are marked *

error: Content is protected !!