ಅತೃಪ್ತರು ವಾಪಸ್ ಬರೋದಾದ್ರೆ ಸಿಎಂ ಸ್ಥಾನ ಬಿಡಲು ಸಿದ್ಧ : ಎಚ್‌ಡಿಕೆ

ಬೆಂಗಳೂರು : ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆದು ವಾಪಸ್ ಬರೋದಾದರೆ ನಾನು ಸಿಎಂ ಸ್ಥಾನ ಬಿಟ್ಉ ಕೊಡಲು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಾಳೆಯ ವಿಶ್ವಾಸಮತ ಯಾಚನೆ ಸಂಬಂದಸ ಕಾಂಗ್ರೆಸ್ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಕುರ್ಚಿ ಬಿಟ್ಟು ಕೊಡುವ ಮಾತನ್ನಾಡಿದ್ದಾರೆ. ಅತೃಪ್ತರ ಕಡೆಯ ನಿರ್ಧಾರ ಲೇಳಿ ಹೇಳುವಂತೆ ಎಚ್.ಡಿ.ಕೆ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ.

ನಾನು ಯಾರನ್ನೂ ಸಂಪರ್ಕಿಸಿಲ್ಲ. ಅವರೊಂದಿಗೆ ಮಾತನಾಡಿ ಬಳಿಕ ನನಗೆ ಬೆಳೆಗ್ಗೆ ಒಳಗ್ಗೆ ತಿಳಿಸಿ ಎಂದು ಗಡುವು ಕೊಟ್ಟಿದ್ದಾರೆ.

ಈ ಸಂಬಂಧ ಕಾಂಗ್ರೆಸ್ ನಾಯಕರು ಪ್ರತಿಕ್ರಯಿಸಿ ನಾಳೆಯೇ ವಿಶ್ವಾಸಮತ ಯಾಚನೆ ಇದ್ದು ಈಗ ಹೇಳಿದರೆ ಹೇಗೆ ಎಂದು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ. ಮೊದಲೇ ಹೇಳಿದ್ದಿದ್ದರೆ ಅವರ ಮನವೊಲಿಕೆಗೆ ಏನಾದರು ಮಾಡಬಹುದಿತ್ತು. ಈಗ ತಡವಾಗಿದೆ. ಆದರೂ ಒಮ್ಮೆ ಪ್ರಯತ್ನಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!