ಎಸ್ಐಟಿ ವಶದಲ್ಲಿರೋ ಬೆಂಗಳೂರು ನಗರ ಡಿಸಿ ವಿಜಯ್‌ಶಂಕರ್ ಮನೆಯಲ್ಲಿ 2.5 ಕೋಟಿ ಜಪ್ತಿ

ಬೆಂಗಳೂರು : ಐಎಂಎ ಬಹುಕೋಟಿ ಹಗರಣ ಸಂಬಂಧ ಕಳೆದ ಎರಡು ದಿನಗಳ ಹಿಂದೆ ಎಸ್ಐಟಿ ಯಿಂದ ಬಂಧನಕ್ಕೊಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ಶಂಕರ್ ಅವರ ಮನೆಯಲ್ಲಿ ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು ಬರೊಬ್ಬರಿ ಎರಡೂವರೆ ಕೋಟಿ ಹಣ ಜಪ್ತಿ ಮಾಡಿದ್ದಾರೆ.
ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ನಾಗರಾಜ್ ಅವರನ್ನು ಸಹ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಅವರ ಹೇಳಿಕೆಗಳ ಆಧಾರದ ಮೇರೆಗೆ ಎಸ್ಐಟಿ ಅಧಿಕಾರಿಗಳು ಡಿಸಿ ವಿಜಯ್‌ಶಂಕರ್ ಅವರನ್ನು ಬಂಧಿಸಿದ್ದರು.
ಬಂಧನದ ಬಳಿಕ ತೀವ್ರ ವಿಚರಣೆಗೆ ಒಳಪಡಿಸಿದ್ದರು. ತನಿಖೆ ವೇಳೆ ಡಿಸಿ ವಿಜಯ್‌ಶಂಕರ್ ಮನೆಯಲ್ಲಿ 2.5 ಕೋಟಿ ಹಣ ಸಿಕ್ಕಿಬಿದ್ದಿದ್ದು ಪೂರ್ಣ ಹಣವನ್ನು ಎಸ್ಐಟಿ ವಶಪಡಿಸಿಕೊಂಡಿದೆ.
ಡಿಸಿ ವಿಜಯ್ ಶಂಕರ್ ವಿರುದ್ಧ ಲಂಚ ಪಡೆದಿರುವ ಆರೋಪವಿತ್ತು ಎನ್ನಲಾಗಿತ್ತು. ಐಎಂಎ ಹಗರಣ ಸಂಬಂಧ ಎಸ್ಐಟಿಯ ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಮುಂದಿನ‌ ದಿನಗಳಲ್ಲಿ ಹಗರಣವು ಯಾವ್ಯಾವ ತಿರುವು ಪಡೆಯುತ್ತದೆ ಎಂಬುದು ಊಹಿಸಲು ಸಾಧ್ಯವಾಗುತ್ತಿಲ್ಲ.

Share Post

Leave a Reply

Your email address will not be published. Required fields are marked *

error: Content is protected !!