ಅಧಿವೇಶನ ಮುಗಿಯುವವರೆಗೂ ಬಿಜೆಪಿ ಶಾಸಕರು ರೆಸಾರ್ಟ್‌ಗಳಲ್ಲೇ ವಾಸ್ತವ್ಯ ..!

ಚಿಕ್ಕಬಳ್ಳಾಪುರ : ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದು ಹಾಗೂ ರಿವರ್ಸ್ ಆಪರೇಷನ್ ಹಿನ್ನಲೆಯಲ್ಲಿ ಬಿಜೆಪಿ ಪಲ್ಷ ತನ್ನ ಶಾಸಕರನ್ನು ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿಸುತ್ತಿದ್ದು ಅಧಿವೇಶನ ಮುಗಿಯುವವರೆಗೂ ಶಾಸಕರು ರೆಸಾರ್ಟ್‌ಗಳಲ್ಲೇ ತಂಗಲಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಹೋಟೆಲ್ ರಮಡ ಮತ್ತು ಸಾಯಿಲೀಲಗಳಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ವಾಸ್ತವ್ಯಕ್ಕೆ ರಮಡ ಹೋಟೆಲ್ ನಲ್ಲಿ 50 ಕೊಠಡಿಗಳು ಹಾಗೂ ಸಾಯಿಲೀಲ ಹೋಟೆಲ್ ನಲ್ಲಿ 35 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಬಿಜೆಪಿಯ ಎಲ್ಲಾ 105 ಶಾಸಕರು ಸಹ ರೆಸಾರ್ಟ್ ಗಳಲ್ಲೆ ವಾಸ್ತವ್ಯ ಇರಲಿದ್ದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಶಾಸಕರು ತಂಗಲಿದ್ದಾರೆ. ಈ ಹಿನ್ನಲೆಯಲ್ಲಿ ಶಾಸಕ ವಿಶ್ವನಾಥ್ ರಮಡ ಹೋಟೆಲ್ ಗೆ ಬೇಟಿ ನೀಡಿ ಕೊಠಡಿಗಳ ಪರೀಶಿಲನೆ ನಡೆಸಿದ್ದಾರೆ. ಅಲ್ಲದೇ ರಮಡ ಹೊಟೆಲ್‌ಗೆ ಎಂ.ಎಲ್.ಸಿ ರವಿಕುಮಾರ್ ಹಾಗೂ ನಂಜನಗೂಡು ಶಾಸಕ ಹರ್ಷವರ್ಧನ್ ಆಗಮಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!