ಶಾಸಕ ಮಹೇಶ್ ಕುಮಠಳ್ಳಿ ರಾಜೀನಾಮೆ ವಾಪಸ್ ಪಡೆಯಲು ಆಗ್ರಹಿಸಿ ಪ್ರತಿಭಟನೆ… ಕುಮಠಳ್ಳಿ ಸಹೋದರನ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಮಾಜಿ ಶಾಸಕ

ಕೋಲಾರ : ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನೆ ಸೃಷ್ಟಿಸಿರುವ ರಾಜೀನಾಮೆ ಪರ್ವ ದಿನಕ್ಕೊಂದು ತಿರುವು ಪಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ರಾಜಿನಾಮೆ ವಾಪಸ್ ಪಡೆಯಬೆಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಥಣಿ ಮತಕ್ಷೇತ್ರದಲ್ಲಿ ಸುಮಾರು ಎಂಭತ್ತುಸಾವಿರ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಸದ್ಯ ಮಹೇಶ್ ಕುಮಠಳ್ಳಿ ಮತದಾರರ ಹಿತ ಮರೆತು ದಿಢೀರ್ ರಾಜಿನಾಮೆ ನೀಡಿ ಅವಮಾನಿಸಿದ್ದಾರೆ ಅವರ ನಡೆ ಸರಿ ಅಲ್ಲ ಯಾವದೆ ಆಮಿಷಕ್ಕು ಒಳಗಾಗದೆ ಶಾಸಕ ಕಾರಣಕ್ಕೂ ಮಹೇಶ್ ಕುಮಠಳ್ಳಿ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದರು.
ಇನ್ನೂ ಇದೇ ವೇಳೆ ಅಥಣಿ ಪಟ್ಟಣದ ಎ.ಕೆ ಹೈಸ್ಕೂಲ್ ಆವರಣದಿಂದ ಪಾದಯಾತ್ರೆ ಹೊರಟ ಪ್ರತಿಭಟನಾಕಾರರು ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಮುತ್ತಿಗೆ ಹಾಕುವ ಯತ್ನವನ್ನು ಪೋಲಿಸರು ಬ್ಯಾರಿಕೇಡ್ ಹಾಕಿ ತಡೆದಾಗ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ಮೆಲೆ ಅರ್ಧಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ನಂತರ ಮಹೇಶ್ ಕುಮಠಳ್ಳಿ ಸಹೋದರ ದಂತವೈದ್ಯ ಪ್ರಕಾಶ್ ಕುಮಠಳ್ಳಿ ಅವರಿಗೆ ಮನವಿ ಕೊಡುವ ಮೂಲಕ ಶಾಸಕ ಮಹೇಶ್ ಕುಮಠಳ್ಳಿ ರಾಜೀನಾಮೆ ವಾಪಸ್ ಪಡೆಯಲು ಮನವೊಲಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾಜಿ ಶಾಸಕ ಶಹಜಹಾನ್ ಡೊಂಗರ್‌ಗಾಂವ್ ಕಣ್ಣೀರು ಹಾಕಿದ ಪ್ರಸಂಗ ಜರುಗಿತು.
ಒಟ್ಟಾರೆಯಾಗಿ ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಮಹೇಶ್‌ಕುಮಠಳ್ಳಿ ರಾಜೀನಾಮೆ ಸದ್ಯ ಕಾರ್ಯಕರ್ತರು ಮುಖಂಡರ ಲ್ಲಿ ಆಕ್ರೋಶ ಉಕ್ಕುವಂತೆ ಮಾಡಿದ್ದು ಹದಿನೈದು ವರ್ಷಗಳ ಬಳಿಕ ಬಿಜೆಪಿ ಭದ್ರಕೋಟೆ ಬೇಧಿಸಿದ್ದ ಕಾಂಗ್ರೆಸ್ ಪಕ್ಷದ ಶಾಸಕ ಮಹೇಶ್ ಕುಮಠಳ್ಳಿ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

-ವಿಲಾಸ ಕಾಂಬಳೆ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!