ಕಾರ್ಯಕರ್ತರ ಅಭಿಪ್ರಾಯದ ಬಳಿಕವಷ್ಟೆ ನನ್ನ ಮುಂದಿನ ನಿಲುವು :ಎಂ.ಟಿ.ಬಿ.ನಾಗರಾಜ್

ಹೊಸಕೋಟೆ : ನಾನು ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸಲ್ಲ, ತಾಲ್ಲೂಕಿನ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದ ನಂತರ ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಅವರು ನಗರದ ಪರಿವೀಕ್ಷಣಾ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಗುಪ್ತ ಸಭೆ ನಡೆಸಿದರು‌. ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಚ್ಚೇಗೌಡರು ನಾನು ಬಿಜೆಪಿಗೆ ಹೋದರೆ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಆದರೆ ನಾನು ಯಾರಿಗೂ ಎಲ್ಲೂ ಬಿಜೆಪಿಗೆ ಹೋಗುತೀನಿ ಅಂತ ಹೇಳಿಲ್ಲ. ಸಮಯ ಸಂಧರ್ಭ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ರಾಜೀನಾಮೆ ನೀಡಿದ್ದೇನೆ. ನಿವೃತ್ತಿ ಪಡಿಬೇಕು ಅಂತ ರಾಜೀನಾಮೆ ಕೊಟ್ಟಿದ್ದೆ, ಕಾದು ನೋಡಿ ತಾಲ್ಲೂಕಿನ ಒಳಿತಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದವರು ಹೇಳಿದರು.

-ನಟರಾಜ್ ಹೊಸಕೋಟೆ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!