ಅತೃಪ್ತರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್‌ಕುಮಾರ್

ಬೆಂಗಳೂರು : ಶಾಸಕರ ರಾಜೀನಾಮೆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ಎಲ್ಲಿಂದ ಒತ್ತಡ ಬಂದರೂ ಮಣಿಯುವುದಿಲ್ಲ ಎಂದು ಎಂದು ಸ್ಪೀಕರ್ ರಮೇಶ್‌ಕುಮಾರ್ ಖಡಕ್ ಮಾತನ್ನಾಡಿದರು.
ವಿಧಾನಸೌಧಕ್ಕೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತೃಪ್ತ ಶಾಸಕರ ನಡೆ ವಿಚಾರದಲ್ಲಿ ಅಸಮಾಧಾನ ಹೊರ ಹಾಕಿದರು. ನನಗೆ ಸಂವಿಧಾನವಷ್ಟೇ ಮುಖ್ಯ ಯಾರ ಒತ್ತಡಕ್ಕೂ‌ ಮಣಿಯುವುದಿಲ್ಲ. ಸಂವಿಧಾನದ ಪ್ರಕಾರ ನಡೆಯುತ್ತೇನೆ ಎಂದರು.
ಇನ್ನೂ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶದ ಬಗ್ಗೆ ದೇಶದ ಉಳಿವಿಗಾಗಿ ನ್ಯಾಯಾಂಗ ಮತ್ತು ಶಾಸಕಾಂಗ ಕಾರ್ಯ ನಿರ್ವಹಿಸುತ್ತಿದೆಯೆಂದರು. ವಿರೋದ ಪಕ್ಷಗಳು ಸ್ಪೀಕರ್‌ರನ್ನು ಟಾರ್ಗೇಟ್ ಮಾಡುತ್ತಿರುವುದಕ್ಕೆ ಗಾಂಧಿಜೀರವರನ್ನು ಉದಾಹರಿಸಿ ಗಾಂದೀಜಿರವನ್ನು ಗುಂಡಿಕ್ಕಿ ಕೊಲ್ಲಲಿಲ್ಲವೆ ಹಾಗೇಯೆ ಇದು ಸಹ ಎಂದ ವರು ಇನ್ನು ನನ್ನ ಬಗ್ಗೆ ಏನೂ ಬಿಡಿಯೆಂದು ಮಾರ್ಮಿಕವಾಗಿ ನುಡಿದರು‌.
ತಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಒತ್ತಿ ಒತ್ತಿ ಹೇಳಿ ಅಧಿವೇಶನಕ್ಕೆ ಹೊರಟರು.

Share Post

Leave a Reply

Your email address will not be published. Required fields are marked *

error: Content is protected !!