ಅಥಣಿ ಶಾಸಕ ಮಹೇಶ್ ಕುಮಠಳ್ಳಿ ವಿರುದ್ಧ ಕಾರ್ಯಕರ್ತರ ಆಕ್ರೊಶ : ಪ್ರತಿಭಟನೆಗೆ ತೀರ್ಮಾನ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜೀನಾಮೆ ನೀಡುವಂತಹ ಯಾವುದೇ ಕಾರಣ ಇಲ್ಲಾ. ಇದು ಅಥಣಿ ಕ್ಷೇತ್ರದ 82 ಸಾವಿರಕ್ಕೂ ಅಧಿಕ ಮತದಾರರಿಗೆ ಮಾಡುತ್ತಿರುವ ಮೋಸ ಎಂದು ಅಥಣಿ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಕಾಯ೯ಕತ೯ರು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಶಾಸಕ ಮಹೇಶ್ ಕುಮಠಳ್ಳಿ ಹೇಳಿದ್ದು ಅದು ಶುದ್ದ ಸುಳ್ಳು ಎಂದು ಕಾರ್ಯಕರ್ತರು ಸಭೆಯಲ್ಲಿ ಹೇಳಿದರು. ಮೂರೂ ತಿಂಗಳ ಹಿಂದೆ ಕೃಷ್ಣಾ ನದಿ ಬತ್ತಿ ಕ್ಷೇತ್ರದ ಜನ ನೀರಿಗಾಗಿ ಹಾಹಾಕಾರ ಉಂಟಾದಾಗ ಯಾಕೆ ರಾಜಿನಾಮೆ ನೀಡಲಿಲ್ಲ ಎಂದು ಪಕ್ಷದ ಮುಖಂಡರನ್ನು ಪ್ರಶ್ನಿಸಿದರು.
ಮಾಜಿ ಶಾಸಕ ಶಹಜಾಹನ ಡೊನಗರಗಾಂವ ಅವರ ನೇತೃತ್ವದಲ್ಲಿ ಅವರ ನಿವಾಸದಲ್ಲಿಂದು ಅಥಣಿ ಕಾಂಗ್ರೆಸ್‌ ಕಾಯ೯ಕತ೯ರ ಸಭೆ ನಡೆಯಿತು.
ಶಾಸಕ ಮಹೇಶ್ ಕುಮಠಳ್ಳಿ ರಾಜೀನಾಮೆ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದು ಪಕ್ಷಕ್ಕೆ ಮತ್ತು ಕ್ಷೇತ್ರದಜನತೆಗೆ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ ಎಂದು ನಂಬಿಸಿ ಕ್ಷೇತ್ರದ ಜನತೆಗೆ ಮಂಕುಬೂದಿ ಎರಚಿದ್ದಾರೆ ಎಂದು ಬಹುತೇಕ ಕಾಯ೯ಕತ೯ರು ಆಕ್ರೋಶ ವ್ಯಕ್ತಪಡಿಸಿ ಮಹೇಶ ಕುಮಠಳ್ಳಿಗೆ ಧಿಕ್ಕಾರ ಕೂಗಿದರು.
ಸಭೆಯಲ್ಲಿ ಅಂತಿಮವಾಗಿ ಮಹೇಶ್ ಕುಮಠಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವದನ್ನು ಖಂಡಿಸಿ ನಾಳೆ (ಶುಕ್ರವಾರ) ರಂದು ಮಹೇಶ್ ಕುಮಠಳ್ಳಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಪಕ್ಷ ತಿಮಾ೯ನಿಸಿದೆ.

-ವಿಲಾಸ ಕಾಂಬಳೆ ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!