ಶಾಸಕರುಗಳು ರಾಜೀನಾಮೆ ವಾಪಸ್ ಪಡೆಯುತ್ತಾರೆಂಬ ನಂಬಿಕೆ ಇದೆ : ಡಿಕೆಶಿ

ಬೆಂಗಳೂರು : ಸ್ಪೀಕರ್ ಎದುರು ಹಾಜರಾಗಲು ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿರು ಹಿನ್ನಲೆಯಲ್ಲಿ ಮಾತನಾಡಿರುವ ಸಚಿವ ಡಿಕೆ.ಶಿವಕುಮಾರ್ ಬರುತ್ತಿರುವ ಶಾಸಕರು ರಾಜೀನಾಮೆ ಹಿಂಪಡೆಯುತ್ತಾರೆಂಬ ನಂಬಿಕೆಯಿದೆ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ತೆರಳಿ ಭೇಟಿ ಸಾಧ್ಯವಾಗದೆ ಬರಿಗೈಲಿ ವಾಪಸ್ಸಾಗಿದ್ದ ಡಿ.ಕೆ.ಶಿವಕುಮಾರ್ ಶಾಸಕರು ರಾಜೀನಾಮೆ ಹಿಂಪಡೆಯುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿರುವುದು ಕುತೂಹಲಕಾರಿಯಾಗಿದೆ.
ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಕ್ಷೇತ್ರದ ಜನತೆ ಶಾಸಕರ ವರ್ತನೆಗೆ ಬೇಸರವಾಗಿದ್ದಾರೆ. ಬರುವ ಶಾಸಕರು ತಮ್ಮ ರಾಜಿನಾಮೆ ಹಿಂಪಡೆಯುತ್ತಾರೆ. ಎಲ್ಲವೂ ಸರಿಯಾಗಲಿದೆ. ಸರ್ಕಾರಕ್ಕೆ ಏನೂ ತೊಂದರೆಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!