ಶಾಸಕರ ರಾಜೀನಾಮೆ ತನಿಖೆ ನಡೆಸಿ ತೀರ್ಮಾನ ಮಾಡಲು ಸ್ಪೀಕರ್‌ಗೆ ಅಧಿಕಾರವಿದೆ : ಉಗ್ರಪ್ಪ

ಬೆಂಗಳೂರು : ಸಂವಿಧಾನದ ಆರ್ಟಿಲ್ 190 ಪ್ರಕಾರ ಶಾಸಕರುಗಳು ರಾಜಿನಾಮೆ ಕೊಟ್ಟಲ್ಲಿ ಅದನ್ನು ತನಿಖೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವ ಸಂವಿಧಾನದ ಅಧಿಕಾರ ಸ್ಪೀಕರ್‌ಗೆ ಇದೆ ಎಂದು ಮಾಜಿ ಸಂಸದ ವಿಎಸ್.ಉಗ್ರಪ್ಪ ಹೇಳಿದ್ದಾರೆ.
1985ರಲ್ಲಿ ದಿನೇಶ್ ಗೋ ಸ್ವಾಮಿ ಅವರ ವರದಿ ಅಧಾರದ ಮೇಲೆ ಟೆನ್ ಶಡ್ಯೂಲ್ 7ರ ಪ್ರಕಾರ ಶಾಸಕರ ರಾಜೀನಾಮೆ ನೀಡಿದರೆ ಮುಂದಿನ ಕ್ರಮ ವಹಿಸಿ ಸ್ಪೀಕರ್ ಅವರೇ ಇತ್ಯರ್ಥ ಪಡಿಸಬೇಕು. ಸ್ಪೀಕರ್ ‌ಗೆ ಕೋರ್ಟ್‌ಗಿಂತ ಹೆಚ್ಚಿನ ಅಧಿಕಾರವಿದೆ. ಸುಪ್ರೀಂ ಕೋರ್ಟ್ ತೀರ್ಮಾನದ ಪ್ರಕಾರ. ಸಂಜೆ 6 ಗಂಟೆ ಒಳಗೆ ರಾಜಿನಾಮೆ ಫಾರ್ಮ್ಯಾಟ್ ಪ್ರಕಾರ ಕೊಡಬಹುದು.
ವಿಚಾರ ಕುರಿತು ಸ್ಪೀಕರ್ ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ಮಾಡಿದ್ದಾರೆ. 6ಗಂಟೆ ಒಳಗೆ ಮಾಡದೇ ಹೋದ್ರೆ ಕಂಟೆಮ್ಟ್ ಆಫ್ ಕೋರ್ಟ್ ಆಗಲಿದೆ. ರಾಜೀನಾಮೆ ಅಂಗೀಕಾರ ಅಥವಾ ಡಿಸ್ಕ್ ‌ಕ್ವಾಲಿಫೈ ಆದ್ರೂ ಮಾಡಬಹುದು ಎಂದು ಉಗ್ರಪ್ಪ ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!