ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಆಗಮನಕ್ಕೆ ವಿಧಾನಸೌಧದಲ್ಲಿ ಬಿಗಿ ಭದ್ರತೆ

ಬೆಂಗಳೂರು : ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಂಬೈನಿಂದ ಬೆಂಗಳೂರಿಗೆ ಅತೃಪ್ತ ಶಾಸಕರು ಆಗಮಿಸುತ್ತಿದ್ದು ವಿಧಾನಸೌಧದಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಳವಾಗಿದೆ‌. ಪೊಲೀಸರು 150ಕ್ಕೂ ಹೆಚ್ಚು ಬ್ಯಾರಿಕೇಡ್‌ಗಳನ್ನು ವಿಧಾನಸೌಧದೊಳಗೆ ಕೊಂಡೊಯ್ದಿದ್ದಾರೆ. ರಾಜೀನಾಮೆ ನೀಡಿರುದ ಶಾಸಕರು ಬಂದಾಗ ಯಾರನ್ನೂ ಓಡಾಡಲು ಬಿಡದಂತೆ ಕ್ರಮ ವಹಿಸಿದ್ದರು.
ಜೇಡ್ ಮಾದರಿ ಸೆಕ್ಯೂರಿಟಿ ನಿರ್ಮಾಣ ಮಾಡಿರುವ ಪೊಲೀಸರು ಸಂಪೂರ್ಣ ವಿಡಿಯೋ ಚಿತ್ರೀಕರಣ ಮೂಲಕ ಶಾಸಕರನ್ನು ಕರೆ ತರಲಿದ್ದಾರೆ. ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಸೆಕ್ಯೂರಿಟಿ ನೀಡಲಾಗಿದ್ದು ವಿಡಿಯೋ ಚಿತ್ರೀಕರಣ ಮೂಲಕ ಶಾಸಕರನ್ನು ಸ್ಪೀಕರ್ ರೂಮ್ ಗೆ ಪೊಲೀಸರು ಕರೆ ತರಲಿದ್ದಾರೆ.
ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಶಾಸಕರನ್ನು ಕರೆತರಲಾಗುತ್ತಿದ್ದು ಅಲ್ಲಿಂದ 15 ನಿಮಿಷದಲ್ಲಿ ವಿಧಾನ ಸೌಧ ತಲುಪುವ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ಭೇಟಿ ನಂತರ ಮತ್ತೆ ಶಾಸಕರು ಸೂಚಿಸುವ ಸ್ಥಳಕ್ಕೆ ಅವರನ್ನು ಸುರಕ್ಷಿತವಾಗಿ ಬಿಡುವುದು ಪೊಲೀಸರ ಜವಾಬ್ದಾರಿಯಾಗಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಸಕಲ ತಯಾರಿ ನಡೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!