ವಿಜಯಪುರದ ಕೆ‌ಬಿಜೆಎನ್‌ಎಲ್ ಕಛೇರಿಗೆ ಮುತ್ತಿಗೆ ಹಾಕಿದ ರೈತ ಸಂಘದ ಕಾರ್ಯಕರ್ತರು

ಸಿಂದಗಿ : ಏತ ನೀರಾವರಿ ಬ್ರಿಜ್ ಕಾಮಗಾರಿ ಸ್ಥಗಿತಗೊಂಡಿದ್ದು ತಾಲೂಕಿನ ರಾಂಪೂರ ಎಪಿ ಗ್ರಾಮದ ಕೃಷ್ಟಾ ಬಾಗ್ಯ ಜಲ ನಿಗಮ ಮುಖ್ಯ ಕಛೇರಿಗೆ ಮುತ್ತಿಗೆ ಹಾಕಿದ ರೈತರು ಪ್ರತಿಭಟನೆ ನಡೆಸಿದರು.
ಸಿಂದಗಿ ತಾಲೂಕಿನ ಕೊರವಾರ ಗ್ರಾಮದ ಗುತ್ತಿ ಬಸವಣ್ಣ ಏತ ನೀರಾವರಿ ಬ್ರಿಜ್ ಕಾಮಗಾರಿ ಸ್ಥಗಿತವಾಗಿದ್ದು ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಕೆ‌ಬಿಜೆಎನ್‌ಎಲ್ ಕಛೇರಿ ಎದರು ಭೊರಗಿ ಪುರದಾಳ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ರೈತರು ಕೊರ್ಟ್ ಆದೇಶವಿದ್ದರು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ನೂರಾರು ರೈತರಿಗೆ ಅನ್ಯಾಯವಾಗುತ್ತಿದೆ. ನ್ಯಾಯಾಲಯದ ಆದೇಶವಿದ್ದರು ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸದೆ ಕಾನೂನಿನ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು‌
ಕಾಂಗ್ರೇಸ್ ಮುಖಂಡರಾದ ಮಲ್ಲು ಸಾವಳಸಂಗ ಮಾತನಾಡಿ ಆಧುನಿಕ ಭಗಿರಥರೆಂದು ಕರೆಸಿಕೊಂಡಿರುವ ಎಮ್ ಬಿ ಪಾಟೀಲರ ತವರು ಜಿಲ್ಲೆಯಲ್ಲೆ ಇಂಥ ಅಧಿಕಾರಿಗಳಿದ್ದು ಉತ್ತಮ ಜನನಾಯಕರ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೇಸರ ವ್ಯಕ್ತಪಡಿಸಿದರು.

ಕೂಡಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸುವ ಭರವಸೆ ನೀಡಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಅಂಬರೀಶ್‌.ಎಸ್.ಎಸ್ ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!