ನರಿ ಧಾಳಿಗೆ ಇಪ್ಪತ್ತು ಕುರಿಗಳು ಸಾವು, ಕಂಗಾಲಾದ ಮಾಲಿಕ

ತುಮಕೂರು : ನರಿಯೊಂದು ಧಾಳಿ ನಡೆಸಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುರಿಮರಿ ಹಾಗೂ ಕುರಿಗಳನ್ನು ಬಲಿ ಪಡೆದಿರುವ ಘಟನೆ ಜಿಲ್ಲೆಯ ಪಾವಗಡ ತಾಲ್ಲೂಕಿನ ರಾಚರ್ಲು ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ ಪೂಜಾರ್ ರಾಜಪ್ಪ ಎಂಬುವವರಿಗೆ ಸೇರಿದ ಕುರಿಗಳು ಎಂದು ಗುರುತಿಸಲಾಗಿದೆ. ಇಂದು ಬೆಳೆಗ್ಗೆ ಎಂದಿನಂತೆ ರಾಜಪ್ಪ ತಮ್ಮ ಕುರಿಗಳನ್ನು ಮೇಯಿಸಲು ಹೋಗಿದ್ದರು.‌ ಸುಮಾರು 10:30 ರ ಸಮಯದಲ್ಲಿ ಏಕಾಏಕಿ ಕುರಿ ಮಂದೆ ಮೇಲೆ ಧಾಳಿ ನಡೆಸಿದ ನರಿಯು ಕುರಿಗಳ ಮಾರಣಹೋಮ‌ ನಡೆಸಿದೆ. ಇದರಿಂದ ಮಾಲಿಕನಿಗೆ ಸುಮಾರು 90 ಸಾವಿರ ರೂ. ನಷ್ಟವಾಗಿದೆ ಎನ್ನಲಾಗಿದೆ.
ತೀರಾ ಬಡತನದಲ್ಲಿ ಕುರಿ ಮೇಯಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು ಘಟನೆಯಿಂದ ಭಾರೀ ಪ್ರಮಾಣದ ನಷ್ಟವಾಗಿದೆ. ನನಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಕುರಿ ಮಾಲಿಕ ರಾಚಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕುಮಾರ್.ಕೆ.ಹೆಚ್ ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!