ಗಾಂಧಿ ಪ್ರತಿಮೆ ಬಳಿ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಶಾಸಕರ ಧರಣಿ

ಬೆಂಗಳೂರು : ಬಹುಮತ ಕಳೆದುಕೊಂಡಿರೋ ರಾಜ್ಯ ಸರ್ಕಾರ ಕೂಡಲೇ ಅಧಿವೇಶನ ನಡೆಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.
ಶಾಸಕರ ಮೇಲೆ ಗುಂಡಾಗಿರಿ ಮಾಡುತ್ತೀರಾ ಎಂದು ಪ್ರಶ್ನಿಸಿದ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆ ಮೇಲೆ ನಿಮಗೆ ನಂಬಿಕೆ ಇದ್ದರೆ ಶಾಸಕರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ, ಅವರ ರಾಜೀನಾಮೆ ಪತ್ರ ಹರಿದು ಹಾಕುವುದು ಸರಿಯಲ್ಲ ಎಂದು ಯಡಿಯೂರಪ್ಪ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿದರು.
ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಶಾಸಕರ ಧರಣಿಯ ಬಳಿಕ ಬಿಜೆಪಿ ಶಾಸಕರ ನಿಯೋಗ ರಾಜಭವನಕ್ಕೆ ತೆರಳಿತು.

Share Post

Leave a Reply

Your email address will not be published. Required fields are marked *

error: Content is protected !!