ಕಾನೂನು ನಮಗೂ ಗೊತ್ತಿದೆ, ವ್ಯಾಕರಣ ಮೇಷ್ಟ್ರು ದಾರಿ ತಪ್ಪಿಸುತ್ತಿದ್ದಾರೆ : ಮಾಜಿ ಸಿಎಂ ಸಿದ್ದು ಕಾಲೆಳೆದ ರೋಷನ್ ಬೇಗ್

ಬೆಂಗಳೂರು : ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸ್ಪೀಕರ್ ರಮೇಶ್‌ಕುಮಾರ್ ಅವರಿಗೆ ತಮ್ಮ
ರಾಜೀನಾಮೆ ಪತ್ರವನ್ನು ರೋಷನ್ ಬೇಗ್ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ‌.
ಪಕ್ಷದ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ ಹೊರತು ಪಕ್ಷಕ್ಕಲ್ಲ ಎಂದು ರೋಷನ್‌ಬೇಗ್ ಹೇಳಿದ್ದಾರೆ. ಇದು ಯಾವುದೇ ಕಾರಣಕ್ಕೂ ಪಕ್ಷಾಂತರ ವಿರೋಧಿ ಕಾಯ್ದೆ (ಆ್ಯಂಟಿ ಡಿಫೆಕ್ಷನ್ ಲಾ) ಉಲ್ಲಂಘನೆಯಲ್ಲ. ಅಂಥವರ ವಿರುದ್ಧ ಯಾವುದೇ ಕ್ರಮ ಸಾಧ್ಯವಿಲ್ಲ ಎಂದ ಅವರುವ್ಯಾಕರಣ ಮೇಷ್ಟ್ರು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷ ‌ವಿರೋಧಿ ಹೇಳಿಕೆ ಆರೋಪ ದಲ್ಲಿ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿತ್ತು. ಇದೀಗ ಬೇಗ್ ರಾಜೀನಾಮೆಯಿಂದ ದೋಸ್ತಿ ಸರ್ಕಾರದ ೧೪ನೇ ವಿಕೆಟ್ ಪತನವಾಗಿದೆ.
ಕಾಂಗ್ರೆಸ್ ನಾಯಕರಾದ ಜಾರ್ಜ್‌, ‌ಕೃಷ್ಣಭೈರೇಗೌಡ ಸ್ಪೀಕರ್ ಕಚೇರಿ ಯಲ್ಲಿದ್ದಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ರೋಷನ್ ಬೇಗ್ ನಾನು ನನ್ನ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದೇನೆ ಎಂದಿದ್ದಾರೆ.
ಅತೃಪ್ತ ಶಾಸಕರ ವಿರುದ್ದ ಸ್ಪೀಕರ್ ಗೆ ದೂರು‌ನೀಡಿದ‌ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ವಾರ್ನಿಂಗ್ ಗೆ ಅತೃಪ್ತರು ಡೋಂಟ್ ಕೇರ್ ಎನ್ನುತ್ತಿದ್ದು ರಾಜೀನಾಮೆ‌ ವಾಪಾಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಸರ್ಕಾರ ಬೀಳಿಸೋದಷ್ಟೇ ನಮ್ಮ ಉದ್ದೇಶ. ರೋಷನ್ ಬೇಗ್ ಜತೆಗೆ ಮತ್ತಷ್ಟು ಶಾಸಕರು ರಾಜೀನಾಮೆ ಕೊಡ್ತಾರೆ ಎಂದು ಅತೃಪ್ತರು ಮಾಹಿತಿ ನೀಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!