ರಾಮಲಿಂಗರೆಡ್ಡಿ ಪರ ದಿನೇಶ್ ಗುಂಡೂರಾವ್ ಬ್ಯಾಟಿಂಗ್

ಬೆಂಗಳೂರು : ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಏನೂ ಹೇಳಿಲ್ಲ. ಅವರು ಬಿಜೆಪಿ ಪಕ್ಷದ ಸೌಲಭ್ಯಗಳನ್ನೂ ಬಳಸಿಕೊಂಡಿಲ್ಲ. ಅವರು ಬಿಜೆಪಿಯ ಬಳಿಯೂ ತೆರಳಿಲ್ಲ ಎಂದು ದಿನೇಶ್ ಗುಂಡೂರಾವ್ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ಹದಿನಲ್ಕು ಜನ ಶಾಸಕರು ರಾಜೀನಾಮೆ ನೀಡಿದ್ದಲ್ಲದೆ ಬಿಜೆಪಿಯವರಿಂದ ವಿಮಾನಗಳ ಸೌಲಭ್ಯಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಸೌಲಭ್ಯ ಪಡೆದು ಮುಂಬೈಗೆ ತೆರಳಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅಸ್ಥಿರವಾಗಿದೆ ಎಂಬ ವಿಚಾರಕ್ಕೆ ಸಂಬಂಧ ಪಟ್ಟಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚಾಟಿ ಬೀಸಿದ್ದಾರೆ.
ರೆಡ್ಡಿಯವರಿಗೆ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಉದ್ದೇಶವಿಲ್ಲ. ಅವರು ಬಿಜೆಪಿಯವರ ಬಳಿ ಹೋಗಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ದಿನೇಶ್ ಅವರ ಈ ಹೇಳಿಕೆಯಿಂದ ರಾಮಲಿಂಗಾರೆಡ್ಡಿ ಅವರ ಮುಂದಿನ ನಿರ್ಧಾರ ನಿಜಕ್ಕೂ ಕುತೂಹಲ ಕೆರಳಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!