ಮಾಜಿ ಶಾಸಕರ ಕಾರು ಅಪಘಾತ : ಓರ್ವ ಬೈಕ್ ಸವಾರ ಸಾವು

ಬೆಳಗಾವಿ : ಜಿಲ್ಲೆಯ ಖಾನಾಪುರ ಕ್ಷೇತ್ರದ ಮಾಜಿ ಶಾಸಕ ಅರವಿಂದ ಪಾಟೀಲರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಇಂದು ಬೆಳಗಾವಿ ಜಿಲ್ಲೆಯ ಕಬ್ಬೂರು ಹೊರವಲಯದಲ್ಲಿ ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ತೆರಳುತ್ತಿದ್ದ ಕಾರಿಗೆ ಗುದ್ದಿದ ಬೈಕ್ ನಿಂದ ಈ ಅಪಘಾತ ಸಂಭವಿಸಿದೆ.

ಖಾಸಗಿ ಕಾರ್ಯಕ್ರಮಕ್ಕಾಗಿ ರಾಯಭಾಗ ಪಟ್ಟಣಕ್ಕೆ ಅರವಿಂದ ಪಾಟೀಲ್ ದಂಪತಿಗಳು ಕಾರಿನಲ್ಲಿ ತೆರಳುತ್ತಿದ್ದರು. ಬೈಕ್ ಡಿಕ್ಕಿಯಾಗುತ್ತಿದ್ದಂತೆ ಅರವಿಂದ ಪಾಟೀಲರ ಕಾರು ಪಲ್ಟಿಯಾಗಿದೆ. ಸಣ್ಣ ಪುಟ್ಟ ಗಾಯಗಳಿಂದ ಅರವಿಂದ ಪಾಟೀಲ್‌ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತವಾಗಿ ಸ್ಥಳದಲ್ಲೇ ವ್ಯಕ್ತಿ ತೀರಿಹೋದ ಹಿನ್ನಲೆಯಲ್ಲಿ ಭೀತಿಯಿಂದ ಮೃತದೇಹವನ್ನು ನೋಡದೆ ಅರವಿಂದ ಪಾಟೀಲ್ ಹೋಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share Post

Leave a Reply

Your email address will not be published. Required fields are marked *

error: Content is protected !!