ಕೋಲಾರ : ಸಿದ್ದಾರ್ಥ ವಸತಿ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಕೋಲಾರ : ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಅದಕ್ಕೆ ನೇರವಾದ ಹೊಣೆ ಸುತ್ತಲಿನ ಪಾಲಕರೇ ವಿನಃ ಸರ್ಕಾರವಲ್ಲ ಎಂದು ಸಮಾಜ ಸೇವಕ ಪ್ರವೀಣ್ ಗೌಡ ತಿಳಿಸಿದ್ದಾರೆ.

ಕೋಲಾರ ನಗರದಲ್ಲಿರುವ ಶ್ರೀ ಸಿದ್ದಾರ್ಥ ವಸತಿ ಪ್ರೌಢಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್ ಪುಸ್ತಕಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಶಿಕ್ಷಣವೆಂದರೆ ಹಣಕೊಟ್ಟು ವಿದ್ಯೆಯನ್ನು ಖರೀದಿಸುವುದಲ್ಲ, ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೆಂದರೆ ಬಡವರ ಮಕ್ಕಳೆಂಬ ಬ್ರಾಂಡ್ ಆಗಿ ಹೋಗಿದೆ. ಆದರೆ ಇಲ್ಲಿ ಸಿಗುವ ಯಾವುದೇ ಸೌಲಭ್ಯವನ್ನು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಮಕ್ಕಳಲ್ಲಿ ಇನ್ನಿಲ್ಲದ ಭಾವನೆಯನ್ನು ತುಂಬುವಂತಹ ಕೆಲಸ ಪಾಲಕರಿಂದಾಗುತ್ತಿದೆ. ಮೊದಲು ಶಾಲೆಗಳ ಬಗ್ಗೆ ಮೂಗು ಮುರಿಯುವುದನ್ನು ನಿಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಎಸ್.ನಂದಿನಿ, ಸಹಶಿಕ್ಷಕರಾದ ವೆಂಕಟನಾಯ್ಕ, ಟಿ ಮಾರುತಿ, ದೈಹಿಕ ಶಿಕ್ಷಕಿ ಮಂಜುಳಾ, ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!