ಬಸ್ ಟರ್ಮಿನಲ್ ಉದ್ಘಾಟನೆಗೆ ಸಂಸದ ಬಚ್ಚೇಗೌಡರಿಗೆ ಆಹ್ವಾನಿಸದ ಹಿನ್ನಲೆ ಹೊಸಕೋಟೆಯಲ್ಲಿ ಬಿಜೆಪಿ ಭಾರೀ ಪ್ರತಿಭಟನೆ-ಪೊಲೀಸರಿಂದ ಲಾಠಿಚಾರ್ಜ್

ಹೊಸಕೋಟೆ : ಹೊಸಕೋಟೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ಉದ್ಗಾಟನಾ ಸಮಾರಂಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ ನಡೆದ ಕಾರಣ ಪೋಲೀಸರು ಮಧ್ಯೆ ಪ್ರವೇಶಿಸಿ ಲಘು ಲಾಠಿಪ್ರಹಾರ ನಡೆಸಿದ್ದಾರೆ. ಇದರಿಂದ ಹಲವರಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ರಾಜ್ಯ ಬಿಜೆಪಿ ಉಇವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಕಪ್ಪು ಪಟ್ಟಿ ಧರಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಪ್ರೋಟೊಕಾಲ್ ಪಾಲನೆ ಮಾಡದೆ ಕಾರ್ಯಕ್ರಮಕ್ಕೆ ನಮ್ಮ ಬಿಜೆಪಿ ಸಂಸದ ಬಚ್ಚೇಗೌಡರನ್ನು ರಾಜಕೀಯ ದುರುದ್ದೇಶದಿಂದ ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್ ನಿವಾಸ್ ಸಪೇಟ್ ಬಿಜೆಪಿ ಕಾರ್ಯಕರ್ತರ ಮನವೊಲಿಕೆಗೆ ಯತ್ನ ನಡೆಸಿದರು. ಒಂದು ಕಡೆ ಬಿಜೆಪಿ ಕಾರ್ಯಕರ್ತರು ಮತ್ತೊಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಾಡುತ್ತಾ ಗೊಂದಲದ ವಾತಾವರಣ ಸೃಷ್ಟಿಸಿದರು. ಕುರ್ಚಿಗಳು,ಹೂವಿನಗಿಡಗಳನ್ನು ಚೆಲ್ಲಾಪಿಲ್ಲಿ ಮಾಡಿ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೆಲವರ ಬಂಧನದ ನಂತರ ನೂತನ ಬಸ್ ನಿಲ್ದಾಣ ಉದ್ಘಾಟನೆಗೆ ವೇದಿಕೆ ಪೊಲೀಸರು ಹರಸಾಹಸ ಪಡಬೇಕಾಯಿತು.  

ಆದರೆ ಕೊನೆಯಲ್ಲಿ ಕೆಲವರನ್ನು ಬಂಧಿಸಲು ಯಶಸ್ವಿಯಾದ ಬಳಿಕ ಪೊಲೀಸರು ಹೊಸಕೋಟೆಯ ಹೈಟೆಕ್ ಬಸ್ ನಿಲ್ದಾಣ ಉದ್ಗಾಟನಾ ಸಮಾರಂಭಕ್ಕೆ ವೇದಿಕೆ ಅನುವುಮಾಡಿಕೊಟ್ಟರು.

Share Post

Leave a Reply

Your email address will not be published. Required fields are marked *

error: Content is protected !!