ಭಾರೀ ಗಾಳಿ-ಮಳೆಗೆ ಮದುವೆ ಶಾಮಿಯಾನ ಕುಸಿತ

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹೀರೆಜಾವೂರನಲ್ಲಿ ನವ ಜೀವನಕ್ಕೆ ಕಾಲಿಡುತ್ತಿದ್ದ ನವ ಜೋಡಿಯ ಮದುವೆಯಲ್ಲಿ ದಿಢೀರ್ ಬಂದ ಮಳೆರಾಯನ ಕಾಟದಿಂದ ಕ್ಷಣಾರ್ಧದಲ್ಲಿ ಪ್ರಾಣಪಾಯದಿಂದ ನವ ಜೋಡಿಗಳು ಪಾರಾಗಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಹೀರೆಜಾವೂರನಲ್ಲಿ ಇಂದು ನಡೆಯುತ್ತಿದ್ದ ಮದುವೆಯ ವೇದಿಕೆ ಮೇಲೆ ಸಾಕಷ್ಟು ಜನ ಬಂಧುಗಳು ನವ ವಧುವರರಿಗೆ ಶುಭ ಹಾರೈಸಲು ಬಂದಿದ್ದರು . ಬಂದ ಬಂಧುಗಳೆಲ್ಲರ ಕಣ್ಣು ನವ ಜೋಡಿಗಳ ಮೇಲಿತ್ತು. ಆದರೆ ಎಲ್ಲಿಂದ ಬಂದನೊ ಮಳೆರಾಯ ನೋಡು ನೋಡುತ್ತಿದಂತೆ ಕ್ಷಣಾರ್ಧದಲ್ಲಿ ಭೀಕರವಾಗಿ ಅಲ್ಲಿ ಅಬ್ಬರಿಸಿದ. ಮಳೆ-ಗಾಳಿ ರಭಸಕ್ಕೆ ಮದುವೆ ಮಂಟಪದ ಅಲಂಕಾರಕ್ಕೆಂದು ಹಾಕಿದ್ದ ಶಾಮಿಯಾನ ಕುಸಿದು ಬಿದ್ದಿತು. ಆದರೆ ಅದೃಷ್ಟವಾತ್ ಮಳೆ-ಗಾಳಿಯ ಆಟಕ್ಕೆ ಕುಸಿದ ಶಾಮಿಯಾನದ ಕೆಳಗೆ ಕುಳಿತಿದ್ದ ಬಂಧುಗಳು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ. ಮದುವೆಗೆಂದು ಅಲಂಕರಿಸಿದ್ದ ವೇದಿಕೆ ಮಳೆ-ಗಾಳಿಗೆ ತುತ್ತಾಗಿದೆ. ಒಟ್ಟಿನಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂಬುದು ಅಲ್ಲಿ ಸಂತಸದ ವಿಷಯವಾಗಿತ್ತು.

Share Post

Leave a Reply

Your email address will not be published. Required fields are marked *

error: Content is protected !!