ಬಾದಾಮಿಗೆ ಯಾವಾಗ ಬರ್ತೀರಾ ಸಿದ್ರಾಮಯ್ಯ ಸಾಹೇಬ್ರೆ…ಟ್ವೀಟ್ ಮೂಲಕ ಟಾಂಗ್ ನೀಡಿದ ಮತದಾರ!

ಬಾಗಲಕೋಟೆ : ಬಾದಾಮಿ ಕ್ಷೇತ್ರಕ್ಕೆ ಶಾಸಕ ಸಿದ್ದರಾಮಯ್ಯ ಭೇಟಿ ನೀಡದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕನೊಬ್ಬ ಬಾದಾಮಿಗೆ ಭೇಟಿ ನೀಡಿ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂಗೆ ಟಾಂಗ್ ನೀಡಿದ್ದಾನೆ.

ಟ್ವೀಟ್ ಮಾಡಿರುವ ಸಾಮಾಜಿಕ ಹೋರಾಟಗಾರ ಇಷ್ಟಲಿಂಗ್ ನರೇಗಲ್, ಸಿದ್ಧರಾಮಯ್ಯ ಸಾಹೇಬ್ರೆ ನಿಮ್ಮ ಬರುವಿಕೆಗಾಗಿ ನಮ್ಮ ಜನ ಕಾಯುತ್ತಿದ್ದಾರೆ. ಅತಿಥಿ ಶಾಸಕರಾಗಬೇಡಿ ಎಂದು ಟ್ವೀಟ್ ಮೂಲಕ ಮಾಜಿ ಸಿಎಂಗೆ ಟಾಂಗ್ ಕೊಟ್ಟಿದ್ದಾನೆ.

ಕುಡಿಯೋ ನೀರಿನ ಸಮಸ್ಯೆ,ಜಾನುವಾರುಗಳಿಗೆ ಮೇವಿಲ್ಲ,ಜನತಾ ದರ್ಶನ ಇಲ್ಲ,ಬರ ವೀಕ್ಷಣೆ ಇಲ್ಲ,ಅಧಿಕಾರಿಗಳು ಯಾರ ಮಾತೂ ಕೇಳುತ್ತಿಲ್ಲ. ಕನಿಷ್ಟ 15 ದಿನಗಳಾದ್ರೂ ಕ್ಷೇತ್ರದಲ್ಲಿರಿ. ನೀವು ಕ್ಷೇತ್ರದಲ್ಲಿದ್ದರೆ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ಬರುವಿಕೆಗಾಗಿ ನಮ್ಮ ಜನ ಕಾಯುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಕಾಲೆಳೆದಿದ್ದಾನೆ.

Share Post

Leave a Reply

Your email address will not be published. Required fields are marked *

error: Content is protected !!