EVM ಹಠಾವೋ,ದೇಶ್ ಬಚಾವೊ-ಆಮ್ ಆದ್ಮಿ ಪಕ್ಷದ ಪ್ರತಿಭಟನೆ

ಬೆಳಗಾವಿ : ‘ಇವಿಎಂ ಹಠಾವೋ ದೇಶ್ ಬಚಾವೋ’ ಎಂದು ವಿನೂತನ ಘೋಷಣೆಯೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿ ಆಮ್ ಆದ್ಮಿ ಪಕ್ಷ ಇಂದು ರಾಷ್ಟ್ರಪತಿಗೆ ಮನವಿ ರವಾನಿಸಿತು.

ಬಹುತೇಕ ಮುಂದುವರೆದ ದೇಶಗಳಲ್ಲಿ EVM ಬ್ಯಾನ್ ಮಾಡಲಾಗಿದೆ. EVM ಮೂಲಕ ಚುನಾವಣಾ ಅಕ್ರಮಗಳನ್ನು ಮಾಡಬಹುದು ಎಂಬ ಗುಮಾನಿ ರಾಷ್ಟ್ರಾದ್ಯಂತ ಇದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ,ಚುನಾವಣಾ ಆಯೋಗದ ಪ್ರಮುಖರನ್ನು ಜೈಲಿಗೆ ತಳ್ಳುವುದು,ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೂಲಕ ಚುನಾವಣೆ ಬಗ್ಗೆ ತನಿಖೆ ನಡೆಸುವುದು,ದೇಶಾದ್ಯಂತ ಎರಡೇ ದಿನದಲ್ಲಿ ಚುನಾವಣೆ ನಡೆಸಿ,ಐದು ದಿನದೊಳಗೆ ಎಣಿಕೆ ಮಾಡುವುದು,ಮುಖ್ಯ ಚುನಾವಣಾಧಿಕಾರಿ ಮೇಲೆ FIR ದಾಖಲಿಸುವುದು ಸೇರಿ ಗೋಪಿನಾಥ ಮುಂಡೆ ಸಾವಿನ ತನಿಖೆ ನಡೆಸಬೇಕೆಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. 373 ಕ್ಷೇತ್ರಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಹೊಂದಾಣಿಕೆ ವ್ಯತ್ಯಾಸವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸದಾನಂದ ಬಾಮನೆ,ಲಗಮನ್ನಾ ಗಸ್ತಿ,ಸರ್ದಾರ್ ಗಸ್ತಿ,ಶೌಕತ್ ಮೌಲಿ,ಗ್ಯಾಬ್ರೀಯೇಲ್ ಡಿಸೋಜಾ,ಎಸ್.ಕೆ.ಮುಲ್ಲಾ,ಪ್ರಭು ನಾಯ್ಕ, ಎಚ್.ಬಿ.‌ಬಾರ್ಲಿ,ಅನಿಲಕುಮಾರ ಬಾಗೇವಾಡಿ,ಮಿಲಿಂದ ಬೋಗಾಳೆ,ಸುಜಿತ ಮುಳಗುಂದ ಹಾಗೂ ಇತರರು ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!