ಮದುವೆ ಸಮಾರಂಭದಲ್ಲಿ ರೈತರು,ಸೈನಿಕರಿಗೆ ಸನ್ಮಾನಿಸಿ ಆಶೀರ್ವಾದ ಪಡೆದ ನೂತನ ದಂಪತಿ

ರಾಯಚೂರು : ಜಿಲ್ಲೆಯ ಸಿಂಧನೂರು ನಗರದ ಉಪ್ಪರವಾಡಿಯಲ್ಲಿ ನಡೆದ ಮದುವೆಯಾದ ನೂತನ ದಂಪತಿ

ರೈತರು ಮತ್ತು ಸೈನಿಕರಿಗೆ ಸನ್ಮಾನಿಸಿ ಆಶೀರ್ವಾದ ಪಡೆದಿದ್ದಾರೆ.

ದಿನಾಂಕ 12 – 6 – 2019 ಬುಧವಾರದಂದು ಬೆಳಗ್ಗೆ ಸಿಂಧನೂರು ನಗರದ ಶ್ರೀಲಕ್ಷ್ಮಿವೆಂಕಟೇಶ್ವರ ಕಲ್ಯಾಣಮಂಟದಲ್ಲಿ ನಡೆದ ಭಗೀರಥ ಬಂಧುಗಳ ಮದುವೆ ಸಮಾರಂಭದಲ್ಲಿ ನೂತನ ವಧು-ವರರಾದ ಮಂಜುನಾಥ ಮತ್ತು ಚೈತ್ರಾ ಅವರು ವಿಶೇಷವಾಗಿ, ವಿನೂತನವಾಗಿ,ನಗರದ ರೈತರಿಗೆ ಮತ್ತು ಸೈನಿಕರಿಗೆ ಗೌರವ ಸನ್ಮಾನ ಮಾಡಿದರು. ಈ ಮೂಲಕ ದೇಶದ ಯೋಧರಿಗೆ ,ರೈತರಿಗೆ ಮೊದಲ ಆದ್ಯತೆ ನೀಡುವುದರ ಮೂಲಕ ಜೈ ಜವಾನ್ ಜೈ ಕಿಸಾನ್ ಮಾತನ್ನು ನಿಜವಾಗಿಸಿದರು. ರೈತ ಮತ್ತು ಸೈನಿಕರ ಅಭಿಮಾನಿಗಳ ವೇದಿಕೆಯ ಸಹಕಾರದೊಂದಿಗೆ ರೈತರು ಮತ್ತು ಸೈನಿಕರಿಗೆ ಕುಟುಂಬದ ಜೊತೆಗೆ ಗೌರವ ಸನ್ಮಾನ ಮಾಡಿ ಆಶೀರ್ವಾದ ಪಡೆಯುವುದರ ಮೂಲಕ ಹೊಸ ಸಂಪ್ರದಾಯದೊಂದಿಗೆ ಮಾದರಿಯ ಕಾರ್ಯಕ್ರಮಕ್ಕೆ ಮಂಜುನಾಥ್-ಚೈತ್ರ ದಂಪತಿ ಸಾಕ್ಷಿಯಾದರು ಎಂದು ರೈತ ಮತ್ತು ಸೈನಿಕರ ಅಭಿಮಾನಿಗಳ ವೇದಿಕೆಯ ಜಿ.ಎಂ.ಓಂಕಾರ ಹೇಳಿದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ರೈತರಾದ ರಾಮರಾವ್,ಶರಣಪ್ಪ,ಸೈನಿಕರಾದ ಎಂ.ಸುರೇಶ್,ನಾಗರಾಜ್ ಉಪ್ಪಾರ, ರಾಘವೇಂದ್ರ ಗಿರಿಜಾಲಿ,ಲೋಕೇಶ್ ,ಕೆ.ಈರಪ್ಪ,ಎಚ್.ಎಂ.ದೊರೆ,ವೀರಯ್ಯ ಸ್ವಾಮಿ,ಮಹಾಂತ ಗೌಡ ಹಾಗೂ ವೇದಿಕೆಯ ಸದಸ್ಯರು ಇತರರು ಇದ್ದರು.

Share Post

Leave a Reply

Your email address will not be published. Required fields are marked *

error: Content is protected !!