ನಿಧಿ ಆಸೆಗಾಗಿ ವಾಮಾಚಾರ,ಜೈನ ವಿಗ್ರಹ ಧ್ವಂಸ!

ದಾವಣಗೆರೆ : ನಿಧಿ ಆಸೆಗೆ ವಾಮಾಚಾರ ಮಾಡಿ ನಿಧಿಗಳ್ಳರು ದೇವರ ವಿಗ್ರಹವನ್ನೇ ಧ್ವಂಸಗೊಳಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ವಂಗಿದುರ್ಗದಲ್ಲಿ ನಡೆದಿದೆ.

ಪುರಾತನ ಜೈನ ದೇವಾಲಯದಲ್ಲಿ ನಿಧಿಗಾಗಿ ವಿಗ್ರಹ ದ್ವಂಸ ಮಾಡಿ ಜೈನ ತೀರ್ಥಂಕರರ ಮೂರ್ತಿಯನ್ನು ವಿರೂಪಗೊಳಿಸಿದ ನಿಧಿಗಳ್ಳರು ವಾಮಾಚಾರ ಮಾಡಿ ನಂತರ ನಿಧಿಗಾಗಿ ಗುಂಡಿ ತೆಗೆದಿದ್ದಾರೆ. ಸಂಜೆ ಜನರು ಜೈನ ದೇವಾಲಯಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಅರಸೀಕೆರೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!