ಶಾಲಾ ಸ್ದಳಾಂತರ ಆದೇಶವನ್ನು ರದ್ದುಮಾಡುವಂತೆ ಮನವಿ

ಧಾರವಾಡ : ಧಾರವಾಡದ ಸಾಧನಕೇರಿಯ ಆಲೂರ ವೆಂಕಟರಾವ್ ಸ್ಮಾರಕ ಪದವಿಪೂರ್ವ ಮಹಾವಿದ್ಯಾಲಯ ಶಾಲೆಯನ್ನು  ಮುಗದ ಗ್ರಾಮಕ್ಕೆ ಸ್ಥಳಾಂತರ ಮಾಡಿದ ಆದೇಶವನ್ನು ಹಿಂದಕ್ಕೆ ಪಡೆದು ಈಗಿರುವ ಸ್ಥಳದಲ್ಲೇ ಮುಂದುವರೆಯಲು ಕ್ರಮ ಕೈಗೊಳ್ಳುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಮನವಿಯನ್ನು ಸಲ್ಲಿಸಿದರು.

ಆಲೂರ ವೆಂಕಟರಾವ್ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಸಾಧನಕೇರಿ,ಧಾರವಾಡ ಈ ಶಾಲೆಯಲ್ಲಿ ವಿದ್ಯಾರ್ಥಿಗಳಾದ ನಾವು 2018-19ರಲ್ಲಿ ಪಿ.ಯು.ಸಿ ಪ್ರಥಮ ವರ್ಷವನ್ನು ಇದೇ ಕಾಲೇಜಿನಲ್ಲಿ ಓದಿ ಪಾಸಾಗಿದ್ದು,ಈಗ 2019-20ರಲ್ಲಿ ಪಿ.ಯು.ಸಿ ದ್ವೀತಿಯ ವರ್ಷಕ್ಕೆ ಪ್ರವೇಶ ಪಡೆದಿದ್ದು ಇದೆ. ಈಗ ಸದರ ಮಹಾವಿದ್ಯಾಲಯವನ್ನು ಮುಗದ ಗ್ರಾಮಕ್ಕೆ ಸ್ಥಳಾಂತರ ಮಾಡಿ ಆದೇಶ ಮಾಡಿದ್ದು ತಿಳಿದುಬಂದಿರುತ್ತದೆ. ಮುಗದ ಗ್ರಾಮವು ನಮಗೆ ಹೋಗಲು ಬರಲು ಅನುಕೂಲವಾಗಿರುವುದಿಲ್ಲ. ಇದು ಧಾರವಾಡದಿಂದ 15 ಕಿ.ಮೀ ದೂರದಲ್ಲಿದ್ದು ಮತ್ತು ಸ್ಥಳಾಂತರ ಮಾಡಿದ ಸ್ಥಳವು ಮುಖ್ಯರಸ್ತೆಯಿಂದ 3 ಕಿ.ಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಇದು ನಮಗೆ ತುಂಬಾ ಅನಾನುಕೂಲವಾಗುತ್ತದೆ ಮತ್ತು ನಾವು ಧಾರವಾಡದ ಸುತ್ತಮುತ್ತಲು ಇರುವ ಹಳ್ಳಿಗಳಿಂದ ಬರುತ್ತಲಿದ್ದು ಈಗಿರುವ ಸ್ಥಳವು ನಮಗೆ ಸೂಕ್ತವಾಗಿರುತ್ತದೆ ಮತ್ತು ಈ ಸಂದರ್ಭದಲ್ಲಿ ವರ್ಗಾವಣೆ ಮಾಡಿದ ಸ್ಥಳಕ್ಕೆ ಹೋಗಲು ಆರ್ಥಿಕವಾಗಿ ತೊಂದರೆಯಾಗುತ್ತದೆ. ಕಾರಣ ಈಗಿರುವ ಸ್ಥಳದಲ್ಲಿ ಕಾಲೇಜು ಮುಂದುವರೆಯಲು ಕೂಡಲೇ ಮರುಆದೇಶ ಮಾಡಿ ಅವಕಾಶ ಮಾಡಿಕೊಡಬೇಕು ಹಾಗೂ ವಿಷಯವಾರು ಮತ್ತು ವರ್ಗವಾರು ಕ್ಲಾಸ್ ಗಳು ಪ್ರತಿನಿತ್ಯ ನಡೆಯುವಂತೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈವರೆಗೂ ವಿಷಯವಾರು ಕ್ಲಾಸುಗಳು ನಡೆಯದೆ ಇರುವುದರಿಂದ ನಮಗೆ ಅನ್ಯಾಯವಾಗುತ್ತದೆ.

ಆದಕಾರಣ ತಾವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಶಿಕ್ಷಣ ಇಲಾಖೆಗೆ ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!