ಹುಬ್ಬಳ್ಳಿ : ಮದುವೆಯಾಗಿ ಮಜಾ ಮಾಡಿ ಕೈಕೊಟ್ಟ ಭೂಪ!

ಹುಬ್ಬಳ್ಳಿ : ಕಾಡಿಬೇಡಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನೊಬ್ಬ ಯುವತಿಯನ್ನು ನಡುದಾರಿಯಲ್ಲಿಯೇ ಕೈಬಿಟ್ಟ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ನಡೆದಿದೆ.

ಕಲ್ಮೇಶ ಬೊರಶೆಟ್ಟಿ ಎಂಬಾತನೇ ಯುವತಿಗೆ ಕೈಕೊಟ್ಟ ಯುವಕ. ಕಳೆದ 2 ವರ್ಷದಿಂದ ಕಲ್ಮೇಶ ಹಾಗೂ ಅದೇ ಗ್ರಾಮದ ಕಾವೇರಿ ಎಂಬುವವರು ಲವ್ ಮಾಡುತ್ತಿದ್ದರು. ಮೊದಮೊದಲು ಕಾವೇರಿ ಈತನ ಪ್ರೀತಿಯ ನಾಟಕಕ್ಕೆ ಕರಗಿರಲಿಲ್ಲ. ಆಮೇಲೆ ಕಲ್ಮೇಶ ಕಾವೇರಿಗೆ ಕಾಡಿಬೇಡಿ ಈ ಲವ್ ಮಾಡಿದ್ದ. ಈ ಪ್ರೇಮ ಮದುವೆ ಹಂತಕ್ಕೂ ತಲುಪಿದೆ. ಯುವತಿಯನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ‌. ಆಗ ಯುವತಿ ನಿರಾಕರಿಸಿದಾಗ ವಿಷ ಕುಡಿಯಲು ಯತ್ನಿಸಿದ್ದಾನೆ. ಬೇರೆಯವರ ಜೊತೆ ಯುವತಿ ಮದುವೆಯಾಗಲು ಬಿಡದೆ,ಯುವತಿಯನ್ನು ತಿರುಪತಿಗೆ ಕರೆದೊಯ್ದು ಮದುವೆಯಾಗಿದ್ದಾನೆ. ಮದುವೆಯಾಗಿ 2 ದಿನ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಕಾಲ‌ಕಳೆದ ಕಲ್ಮೇಶ,ಬಳಿಕ ಯುವತಿಯನ್ನ ಹುಬ್ಬಳ್ಳಿಗೆ ಕರೆ ತಂದುಬಿಟ್ಟು ಪರಾರಿಯಾಗಿದ್ದಾನೆ ಎಂದು ಯುವತಿ ಹಾಗೂ ಪೋಷಕರು ಆರೋಪಿಸುತ್ತಿದ್ದಾರೆ.

ಈಗ ಯುವಕನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಯುವಕನ ಮನೆಯವರಿಂದ ಮದುವೆಗೆ ವಿರೋಧವಿದೆ. ಯುವಕನ ತಾಯಿಯ ವಿರೋಧಕ್ಕೆ ಹೆದರಿ ಯುವತಿಯನ್ನ ಕೈಬಿಟ್ಟಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸುತ್ತಾರೆ. ಯುವಕನ ತಾಯಿ ಶಿವಲೀಲಾ ‌ಬೋರಶೆಟ್ಟಿ ನವಲಗುಂದ ತಾಲೂಕಿನ ಜೆಡಿಎಸ್ ಘಟಕದ ಅಧ್ಯಕ್ಷೆಯಾಗಿದ್ದು,ರಾಜಕೀಯ ಒತ್ತಡ ಹಾಕುತ್ತಿದ್ದಾರೆ. ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಿಸಲು ಹೋದ್ರೆ ರಾಜಕೀಯ ಒತ್ತಡದಿಂದ ಪ್ರಕರಣ ದಾಖಲು ಮಾಡಿಕೊಳ್ಳಲು ಬಿಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಹುಡುಗನಿಗಾಗಿ ಯುವತಿ ಕಾವೇರಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾಳೆ. ನನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ.‌ ಮದುವೆಯಾಗಿ ನಾಪತ್ತೆಯಾದ ಹುಡುಗನಿಗಾಗಿ ಯುವತಿಯ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ನನ್ನ ಗಂಡನನ್ನ ಹುಡುಕಿಕೊಡಿ ಎಂದು ನವವಿವಾಹಿತೆ ಅಂಗಲಾಚುತ್ತಿದ್ದಾಳೆ.

Share Post

Leave a Reply

Your email address will not be published. Required fields are marked *

error: Content is protected !!