ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಚತೆ ಕಾಪಾಡಿಕೊಳ್ಳಿ-ಕೋಲಾರ ಡಿವೈಎಸ್ ಪಿ ಅನುಷ ಕರೆ

ಕೋಲಾರ : ಕೋಲಾರ ತಾಲ್ಲೂಕು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ,ಪುರಸಭೆ,ನಗರಸಭೆಗಳ ಮೇಲೆ ಅವಲಂಬಿಗಳಾಗದೆ ನಮ್ಮ ನಮ್ಮ ಪರಿಸರವನ್ನು ನಾವೇ ಸ್ವಚ್ಚ ಮಾಡಿಕೊಳ್ಳುವ ಅಭ್ಯಾಸವನ್ನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಪ್ರಬೇಷನರಿ ಡಿವೈಎಸ್ .ಪಿ.ಅನುಷಾ ತಿಳಿಸಿದ್ದಾರೆ.

ಕೋಲಾರ ನಗರದಲ್ಲಿರುವ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಸುತ್ತಮುತ್ತಲೂ ಒಂದು ದಿನದ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಚೇರಿಗಳಲ್ಲಾಗಲಿ,ಮನೆಗಳ ಆಸುಪಾಸಿನಲ್ಲಾಗಲಿ ನಾವು ಸ್ವಯಂಪ್ರೇರಿತರಾಗಿ ಸ್ವಚ್ಛತೆಗೆ ಮುಂದಾಗಬೇಕು. ಆಗ ಮಾತ್ರ ಮಹಾತ್ಮ ಗಾಂಧೀಜೀಯವರ ಕನಸು ನನಸಾಗಲು ಸಾಧ್ಯ ಎಂದರು.

ಪೊಲೀಸ್ ಸಿಬ್ಬಂದಿಗಳು ತಮ್ಮ ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿ,ಹಾಗೆಯೇ ಎಲ್ಲಾ ಇಲಾಖೆಗಳ ಸಿಬ್ಬಂದಿಗಳು ಇದನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸರ್ಕಾರಿ ನೌಕರರೇ ಈ ರೀತಿ ಸ್ವಚ್ಚತೆಗೆ ಮುಂದಾಗುವುದರಿಂದ ರೈತರು ವ್ಯಾಪಾರಸ್ಥರು ಕೂಲಿ ಕಾರ್ಮಿಕರಲ್ಲಿ ಅರಿವು ಮೂಡಿಸಿದಂತಾಗುತ್ತದೆ. ಇದರಿಂದ ಗ್ರಾಪಂ,ಪಪಂ,ಪುರಸಭೆ,ನಗರಸಭೆಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದು. ಇದು ಆರೋಗ್ಯದ ಇಲಾಖೆಗೂ ಸಹಕಾರ ನೀಡಿದಂತಾಗುತ್ತದೆ ಮತ್ತು ಪ್ರತಿ ಕಚೇರಿಗಳಲ್ಲಿ ಒಂದಿಷ್ಟು ಸ್ಥಳಾವಕಾಶ ಇದ್ದೇ ಇರುತ್ತದೆ,ಸುತ್ತ ಕಾಂಪೌಂಡ್‍ಗಳಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಇದರಿಂದ ಪರಿಸರ ಸಂರಕ್ಷಣೆಗೂ ಕೆಲಸ ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು. ಇನ್ನು ಈ ಸ್ವಚ್ಛಾ ಕಾರ್ಯದಲ್ಲಿ ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯ ಉಪನಿರೀಕ್ಷಕ ಪ್ರಿದೀಸ್ ಪೊಲೀಸ್ ಠಾಣೆ ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳು ಠಾಣೆಯ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Share Post

Leave a Reply

Your email address will not be published. Required fields are marked *

error: Content is protected !!