ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 218 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 24 ಜೂನ್ 2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗೆ 18 ರಿಂದ 25 ವರ್ಷ, ಎಸ್ ಸಿ/ ಎಸ್ಟಿ/ ಕೆಟಗೆರಿ 01, 2ಎ, 3ಎ, 3ಬಿ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ (10ನೇ ತರಗತಿ) ಅಥವಾ ತತ್ಸಮಾನ ಉತ್ತೀರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ; ಸಾಮಾನ್ಯ/ ಒಬಿಸಿ (2ಎ, 2ಬಿ, 3ಎ, 3 ಬಿ): 250 ರು. ಎಸ್ ಸಿ/ ಎಸ್ಟಿ/ ಕೆಟಗೆರಿ-1/ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 100 ರು. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ನಿಗದಿತ ಶುಲ್ಕವನ್ನು HDFC ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿ ಅಧಿಕೃತ ಶಾಖೆಗಳ ಕಚೇರಿಯಲ್ಲಿ ಚಲನ್‌ನ ಹಣ ಪಾವತಿಸಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಹಿಷ್ಣು ಪರೀಕ್ಷೆ ಮತ್ತು ಶಾರೀರಿಕ ಮಾನದಂಡ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಸಹಿಷ್ಣುತೆ ಪರೀಕ್ಷೆ: (ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ) 

  • 2 ಕಿಲೋ ಮೀಟರ್ ಓಟ (10 ನಿಮಿಷದಲ್ಲಿ).
  • ಉದ್ದ ಜಿಗಿತ ಅಥವಾ ಎತ್ತರ ಜಿಗಿತ (3.80 ಮೀಟರ್‍ ಗೆ ಕಡಿಮೆ ಇಲ್ಲದಂತೆ) ಅಥವಾ ಎತ್ತರ ಜಿಗಿತ 1.20 ಮೀಟರ್‍ ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ).
  • ಗುಂಡು ಎಸೆತ(7.26 ಕೆ.ಜಿ) : 5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ ದೂರ ಎಸೆಯಬೇಕು. (ಮೂರು ಅವಕಾಶಗಳು) 

ದೇಹದಾರ್ಢತೆ ಪರೀಕ್ಚೆ: (ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ)

  • ಕನಿಷ್ಠ ಎತ್ತರ: 170 ಸೆಂ.ಮೀ. ಕಡಿಮೆ ಇಲ್ಲದಂತೆ (ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ)
    *ಎದೆ ಸುತ್ತಳತೆ: 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5.ಸೆಂ.ಮೀ.

ವೇತನ ಶ್ರೇಣಿ: 21400-500-22400-550-24600-600-27000-650-29600-750-32600-850-36000-950-39800-
1100-42000

ಪಿಂಚಣಿ ಸೌಲಭ್ಯ : ಸರ್ಕಾರದ ಆದೇಶ ಸಂಖ್ಯೆ: ಎಫ್‍ಡಿ(ಎಸ್‍ಪಿಎಲ್) 04 ಪಿಇಟಿ 2005, ದಿನಾಂಕ:31.03.2006 ರಂತೆ ನೂತನ
ಅಂಶದಾಯಿ ಪಿಂಚಣಿ ಸೌಲಭ್ಯ ಅನ್ವಯವಾಗುವುದು.

Share Post

Leave a Reply

Your email address will not be published. Required fields are marked *

error: Content is protected !!