ಐಎಂಎ ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಗಳಿಂದ 500 ಕೋಟಿ ರೂ. ವಂಚನೆ!!!

ಬೆಂಗಳೂರು : ನಮ್ಮ ಜನ ತುಂಬಾನೇ ಬುದ್ಧಿವಂತರು,ಅದರಲ್ಲಿ ಯಾವುದೇ ಸಂದೇಹವೇ ಇಲ್ಲ,ನಮ್ಮ ಜನರ ಬುದ್ಧಿವಂತಿಕೆಯನ್ನೇ ಬಂಡವಾಳ ಮಾಡಿಕೊಂಡ ಬೆಂಗಳೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಐಎಂಎ ಜ್ಯುವೆಲರ್ಸ್(IMA Jewellers) ಲೇಡಿ ಕರ್ಜನ್ ರೋಡ್ ಹಾಗೂ ಜಯನಗರಗಳಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿತ್ತು.  

ಮೊದಲು ಈ ಪ್ರತಿಷ್ಠಿತ ಮಳಿಗೆಯು ವಿನೂತನ ಮಾದರಿಯ ಆಭರಣಗಳನ್ನು ಹಾಗೂ ತನ್ನದೇ ಆದ ವಿಭಿನ್ನ ರೀತಿಯ ವ್ಯವಹಾರ ಶೈಲಿಯನ್ನು ಹೊಂದಿತ್ತು. ಈ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಈಗ ನಾಪತ್ತೆಯಾಗಿ ಒಂದು ಸಂದೇಶವನ್ನು ಈಗ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈ ಮಳಿಗೆಯಲ್ಲಿ ಯಾವುದೇ ರೀತಿಯ ವೇಸ್ಟೇಜ್ ಹಾಗೂ ತಯಾರಿಕಾ ವೆಚ್ಚವನ್ನು ವಿಧಿಸುತ್ತಿರಲಿಲ್ಲ,ಇವರು ಬರೀ ಚಿನ್ನದ ಬೆಲೆಯಲ್ಲಿ ಆಭರಣವನ್ನು ಗ್ರಾಹಕರಿಗೆ ನೀಡುತ್ತಿದ್ದರು. ಅದು ಹೇಗೆ? ಎಂದು ಎಷ್ಟೋ ದೊಡ್ಡ ಮಳಿಗೆಗಳ ಮಾಲೀಕರು ತಲೆಚಚ್ಚಿಕೊಳ್ಳುತ್ತಿದ್ದರು.

ಆದರೆ ಈಗ ಎಲ್ಲಾ ಬಯಲಾಗಿದೆ,ಅವರು ಯಾವ ರೀತಿ ಕಡಿಮೆ ಬೆಲೆಗೆ ಚಿನ್ನಾಭರಣ ಕೊಡುತ್ತಿದ್ದರು ಎಂಬುದು ಈಗ ನಮ್ಮ ಜನತೆಯ ಕಣ್ಣ ಮುಂದಿದೆ. ಇವರು ಜನರ ಬಳಿ ಶೇಕಡಾ 4 ರಂತೆ ಬಡ್ಡಿಗೆ ಹಣ ಪಡೆಯುತ್ತಿದ್ದರು. ಇವರು ಜನತೆಯ ಮುಗ್ಧತೆಯನ್ನು ಬಂಡವಾಳವನ್ನಾಗಿಸಿಕೊಂಡು ಈಗ ಸುಮಾರು 500 ಕೋಟಿ ರೂ.ಗಿಂತಲೂ ಹೆಚ್ಚಿನ ಹಣವನ್ನು ವಂಚಿಸಿದ್ದಾರೆ. ಅದೆಷ್ಟೋ ಕುಟುಂಬಗಳು ಈಗ ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲ ನಮ್ಮ ಜನರಿಗೆ ಯಾವಾಗ ಬುದ್ಧಿ ಬರುತ್ತದೆ, ಯಾರೋ ಮುಖ ಮೂತಿ ತಿಳಿಯದವನ ಬಳಿ ಲಕ್ಷಾಂತರ ರೂ.ಗಳನ್ನು ಹೇಗೆ ಠೇವಣೆ ಮಾಡುತ್ತಾರೆ…???

ಆದ್ದರಿಂದ ಇದೀಗ ಅಗ್ರಿಗೋಲ್ಡ್‌ನಂತಹ ಹಣ ಹೂಡಿಕೆ ಸಂಸ್ಥೆಗಳ ಸಾಲಿಗೆ ಈಗ ಐಎಂಎ ಜ್ಯುವೆಲರ್ಸ್ ಸೇರಿದೆ.

ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ನಿಮ್ಮ ಬಳಿ ಹಣವಿದ್ದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ, ಬದಲಿಗೆ ನಿಮ್ಮ ಅಮೂಲ್ಯ ಕೂಡಿಟ್ಟ ಹಣವನ್ನು ಇಡುವುದು ಇಂತಹ ಮೋಸ ಮಾಡುವ ಸಂಸ್ಥೆಗಳಲ್ಲಿ ಅಲ್ಲ.

Share Post

Leave a Reply

Your email address will not be published. Required fields are marked *

error: Content is protected !!