ಟ್ರಾಫಿಕ್ ಪೊಲೀಸರ ಬೇಜವಾಬ್ದಾರಿತನಕ್ಕೆ ಬೈಕ್ ಸವಾರ ಬಲಿ

ಚಿಕ್ಕಬಳ್ಳಾಪುರ : ಟ್ರಾಫಿಕ್ ಪೊಲೀಸರ ಬೇಜವಾಬ್ದಾರಿತನಕ್ಕೆ ಬೈಕ್ ಸವಾರನಿಂದ ಚಿಕ್ಕಬಳ್ಳಾಪುರ ವೈದ್ಯರ ಪುತ್ರನೋರ್ವ ಬಲಿಯಾದ ಘಟನೆ ದೇವನಹಳ್ಳಿ ಬಳಿಯ ನಂದಿ ಉಪಚಾರ್ ಮುಂಭಾಗ ನಡೆದಿದೆ.

ಮೃತ ಬೈಕ್ ಸವಾರನನ್ನು ಚಿಕ್ಕಬಳ್ಳಾಪುರದ ಅನಂತ್ (24) ಎಂದು ಗುರುತಿಸಲಾಗಿದೆ. ಮೃತ ಯುವಕ ಅನಂತ್ ಚಿಕ್ಕಬಳ್ಳಾಪುರದ ಜಿ.ಎಸ್.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿದ್ದಲಿಂಗಪ್ಪ ಎಂಬುವರ ಪುತ್ರ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಬೆಂಗಳೂರು ಕಡೆ ದೇವನಹಳ್ಳಿ ಬಳಿಯ ನಂದಿ ಉಪಚಾರ್ ಮುಂಭಾಗ ಅನಂತ್ ತನ್ನ ಸ್ನೇಹಿತನ ಜೊತೆ KA 40 EC 5245 ಸಂಖ್ಯೆಯ ಬೈಕಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ದೇವನಹಳ್ಳಿ ರಾಣಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಕ್ಯಾಂಟರ್ ನಿಲ್ಲಿಸಲು ಮುಂದಾದ ಪೊಲೀಸರನ್ನು ತಪ್ಪಿಸಲು ಹೋಗಿ ಅನಂತ್ ಬೈಕ್ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.  ರಭಸಕ್ಕೆ ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ಬಿದ್ದು ಹೆಲ್ಮೆಟ್ ಹಾಕಿಕೊಂಡಿದ್ದರೂ ತಲೆಯ ಭಾಗ ಜಜ್ಜಿ ಹೋಗಿದೆ. ಬೈಕ್ ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ಅನ್ನು ನಿಲ್ಲಿಸಲು ಮುಂದಾಗಿದ್ದ ಟ್ರಾಫಿಕ್ ಪೊಲೀಸರ ಅವೈಜ್ಞಾನಿಕ ಕ್ರಮದಿಂದಾಗಿ ಈ ಅಪಘಾತ  ನಡೆದಿದೆ ಎಂದು ತಿಳಿದುಬಂದಿದೆ.

ನಿತ್ಯ ಪೊಲೀಸರು ಇದೇ ಸ್ಥಳದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮಕೈಗೊಳ್ಳುವ ಪೊಲೀಸರ ಕಾರ್ಯಾಚರಣೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇದೇ ಜಾಗದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಲೇ ಇದ್ದರೂ, ಮೇಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತಿಲ್ಲ ಎಂದು ಘಟನೆ ನಡೆದ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ. ಅಂತಾರಾಷ್ಟ್ರೀಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.  

Share Post

Leave a Reply

Your email address will not be published. Required fields are marked *

error: Content is protected !!