ಸ್ಪೀಕರ್ ರಮೇಶ್ ಕುಮಾರ್ ಸಖತ್ ಡ್ಯಾನ್ಸ್ ವೀಡಿಯೊ ವೈರಲ್!

ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆಯುತ್ತಿರುವ ಶ್ರೀನಿವಾಸಪುರ ಹಬ್ಬದ ಕಾರ್ಯಕ್ರಮದಲ್ಲಿ ಸ್ಪೀಕರ್ ರಮೇಶ್ ಕುಮಾರ್‌ ಸಖತ್‌ ಸ್ಟೆಪ್ ಹಾಕಿದರು. ನಿನ್ನೆ ರಾತ್ರಿ ಶ್ರೀನಿವಾಪುರ ಪಟ್ಟಣದಲ್ಲಿ ನಡೆದ ನರಸಿಂಹಸ್ವಾಮಿಯ ಉತ್ಸವದ ಮೆರವಣಿಗೆ ವೇಳೆ ಜೊತೆಗಿದ್ದ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಭರ್ಜರಿ ಸ್ಟೆಪ್ಸ್ ಹಾಕಿ ನೆರೆದಿದ್ದವರನ್ನು ಹುರಿದೆಬ್ಬಿಸುವಂತೆ ಮಾಡಿದರು.

ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು ಅಭಿಮಾನಿ ಬಳಗಕ್ಕೆ ಸಖತ್ ಜೋಶ್ ನೀಡಿತು. ರಮೇಶ್ ಕುಮಾರ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದು ರಮೇಶ್ ಕುಮಾರ್ ಅವರಲ್ಲಿಯೂ ಒಬ್ಬ ಕಲಾವಿದ ಅಡಗಿದ್ದಾನೆ ಎನ್ನುವ ಗುಸು ಗುಸು ಚರ್ಚೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

Share Post

Leave a Reply

Your email address will not be published. Required fields are marked *

error: Content is protected !!