ಕರ್ನಾಟಕಕ್ಕೆ ಏನು ಬೇಕು?ಎಂಬುದನ್ನು ಸಿಎಂ ಹೇಳಲಿ,ಈಡೇರಿಸಲು ನಾವು ಸಿದ್ಧ-ಕೇಂದ್ರ ಸಚಿವ ಜೋಷಿ

ಧಾರವಾಡ : ಕರ್ನಾಟಕಕ್ಕೆ ಏನು ಬೇಕು? ಎಂಬುದನ್ನು ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಸಂಸದರೊಂದಿಗೆ ಚರ್ಚಿಸಬೇಕು. ರಾಜ್ಯಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾವು ಸಿದ್ಧರಿದ್ದೇವೆ. ಅದು ನಮ್ಮ ಹಕ್ಕು ಕೂಡ ಎಂದು ಕೇಂದ್ರದ ಸಂಸದೀಯ ವ್ಯವಹಾರ, ಗಣಿ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಕೇಂದ್ರ ಸಚಿವರಾದ ಬಳಿಕ ಧಾರವಾಡ ನಗರಕ್ಕೆ ಮೊದಲ ಸಲ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಿಂದ ಬಿಜೆಪಿಯ 25 ಜನರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಹೊಸಬರೂ ಇದ್ದಾರೆ. ಪ್ರಮುಖ ಖಾತೆಗಳೂ ನಮ್ಮ ರಾಜ್ಯಕ್ಕೆ ಸಿಕ್ಕಿರುವುದರಿಂದ ಮುಖ್ಯಮಂತ್ರಿಗಳು ನಮ್ಮೊಂದಿಗೆ ರಾಜ್ಯಕ್ಕೆ ಏನು ಬೇಕು? ಏನು ಬೇಡ? ಎಂಬುದರ ಬಗ್ಗೆ ಚರ್ಚಿಸಬೇಕು. ಭಾರತ ಸರ್ಕಾರ ಅವುಗಳನ್ನು ಈಡೇರಿಸಲು ಸಿದ್ಧವಿದೆ. ಅದು ನಮ್ಮ ಕರ್ತವ್ಯ ಕೂಡ ಹೌದು. ವಿನಾಃಕಾರಣ ರಾಜ್ಯಸರ್ಕಾರದ ಸಚಿವರು,ಮುಖ್ಯಮಂತ್ರಿಗಳು ಆರೋಪ,ಪ್ರತ್ಯಾರೋಪ ಮಾಡುವುದು ಬೇಡ ಎಂದರು.

ಹುಬ್ಬಳ್ಳಿಗೆ ಮೊನ್ನೆ ನಾನು ಬಂದಿದ್ದೆ,ಆದರೆ ದಿಢೀರನೆ ಪ್ರಧಾನಿಗಳು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರಿಂದ ತರಾತುರಿಯಲ್ಲಿ ನಾನು ವಾಪಸ್ ಹೋಗಿದ್ದೆ. ಧಾರವಾಡಕ್ಕೆ ಭೇಟಿ ನೀಡಲು ಆಗಿರಲಿಲ್ಲ ಎಂದು ಉತ್ತರಿಸಿದರು.  

ಇದೇ ತಿಂಗಳು 17 ರಂದು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಲಾಗುವುದು. ರಾಜ್ಯ ಸರ್ಕಾರವೂ ಕೂಡ ರಾಜ್ಯಕ್ಕೆ ಏನು ಬೇಕು? ಎಂಬುದನ್ನು ಹೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!