ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೆ ಅಭಿನಂದನೆ ಯಾತ್ರೆ

ಬಾಗಲಕೋಟ :ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ್ ಅವರ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಯಾತ್ರೆ ನಡೆಯಿತು.

ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀನಿವಾಸ ಚಿತ್ರಮಂದಿರದಿಂದ ಬನಹಟ್ಟಿಯ ಈಶ್ವರ ಈಶ್ವರಲಿಂಗ ಮೈದಾನದವರೆಗೆ ಪ್ರಮುಖ ಬೀದಿಗಳಲ್ಲಿ ಕೆ.ಎಸ್.ಈಶ್ವರಪ್ಪ,ಶಾಸಕ ಸಿದ್ದು ಸವದಿ,ಸಂಸದ ಪಿ.ಸಿ.ಗದ್ದಿಗೌಡರ್ ನೇತೃತ್ವದಲ್ಲಿ  ಬಿಜೆಪಿ ಅಭಿನಂದನಾ ಯಾತ್ರೆ ಮತ್ತು ಅಭೂತಪೂರ್ವ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಭೂತಪೂರ್ವ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಸಂಸದ ಪಿ.ಸಿ.ಗದ್ದಿಗೌಡರ ಅಭಿನಂದನೆ ಸಲ್ಲಿಸಿದರು.

ಈ ವಿಜಯೋತ್ಸವದಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು,ಹಿರಿಯರು,ಮಹಿಳೆಯರು,ಬಿಜೆಪಿ ಅಭಿಮಾನಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Share Post

Leave a Reply

Your email address will not be published. Required fields are marked *

error: Content is protected !!