‘ಅಮರ್’​ ಮೊದಲ ವಾರದ ಗಳಿಕೆ ಎಷ್ಟು ಗೊತ್ತಾ..?

ಮೊದಲ ವಾರದಲ್ಲೇ 3 ಕೋಟಿ ಅಂದ ಮೇಲೆ ಸಿನಿಮಾ ಗ್ರಾಸ್ ಕಲೆಕ್ಷನ್ 4.5 ಕೋಟಿ ಆಗಿರಬಹುದು ಎನ್ನುವುದು ಸಿನಿ ಪಂಡಿತರ ಮಾತು. ಇದರಲ್ಲಿ 1.5 ಕೋಟಿ ರೂ.ಪ್ರದರ್ಶನ ಮಂದಿರಗಳ ಬಾಡಿಗೆ ಹೋಗುತ್ತೆ. ಮಿಕ್ಕ 3 ಕೋಟಿ ನಿರ್ಮಾಪಕರ ಜೇಬಿಗೆ.

ಈಗಿನ ಚಿತ್ರಗಳ ಪೈಕಿ ಅಭಿಷೇಕ್ ಹಾಗೂ ತಾನ್ಯಾ ಹೋಪ್ ಅಭಿನಯದ ‘ಅಮರ್’ ಒಂದು ಡೀಸೆಂಟ್ ಹಿಟ್ ಎಂದು ಗಾಂಧಿನಗರದಲ್ಲಿ ಪರಿಗಣಿಸಲಾಗಿದೆ. ಈ ಮೂಲಕ ಅಭಿಷೇಕ್​ ಚಿತ್ರ ರಂಗದಲ್ಲಿ ಗಟ್ಟಿಯಾಗಿ ಕಾಲೂರಿದಂತಾಗಿದೆ . ನಿರ್ಮಾಪಕ ಸಂದೇಶ್ ನಾಗರಾಜ್ ಚಿತ್ರಕ್ಕೆ ಯಾವುದೇ ಕೊರತೆ ಮಾಡದೆ ಹಣ ಹೂಡಿದ್ದಾರೆ. ದರ್ಶನ್ ಅವರ ಅತಿಥಿ ಪಾತ್ರ ಸಹ ಚಿತ್ರಕ್ಕೆ ವರ್ಕೌಟ್ ಆಗಿದೆ.

ಕ್ಲೈಮ್ಯಾಕ್ಸ್​​ಲ್ಲಿ ಅಭಿಷೇಕ್​ ಕುರಿತು ದರ್ಶನ್​ ಹೇಳುವ ಮಾತುಗಳು ಸಹ ಅಭಿಮಾನಿಗಳಿಗೆ ಇಷ್ಟವಾಗಿದೆ.”ಅಮರ್” ನಟ ಅಭಿಷೇಕ್​ಇನ್ನು ತಕರಾರು ಕೇಳಿ ಬರುತ್ತಿರುವುದು ಚಿತ್ರದ ಸೆಕಂಡ್ ಹಾಫ್‌ ಬಗ್ಗೆ. ನಿರ್ದೇಶಕ ನಾಗಶೇಖರ್ ಇದನ್ನು ಗಟ್ಟಿಗೊಳಿಸಬಹುದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಾಯಕ, ನಾಯಕಿಯ ಹಿಂದೆ ಹೋಗಿ ತನ್ನ ಪ್ರೀತಿ ಪಡೆಯುವುದಷ್ಟೇ ಸೆಕೆಂಡ್ ಹಾಫ್‌ನಲ್ಲಿದೆ.

ಈ ದ್ವಿತೀಯಾರ್ಧದಲ್ಲೇ ಏನಾದರೂ ಹೊಸತು ಬೇಕಿತ್ತು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಮೊದಲ ಸಿನಿಮಾಕ್ಕೆ ಅಭಿಷೇಕ್ ಅಂಬರೀಶ್ ಮಿಶ್ರ ಪ್ರತಿಕ್ರಿಯೆ ಪಡೆದಿದ್ದಾರೆ.ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಅಭಿಷೇಕ್​ ಅಂಬರೀಶ್ ಮುಂದಿನ ಸಿನಿಮಾಕ್ಕೆ ಮೂರು ನಿರ್ಮಾಪಕರು ಕಾಯುತ್ತಿದ್ದಾರೆ. ಅದರಲ್ಲೇ ಯಾರಿಗೆ ಅಭಿಷೇಕ್ ಕಾಲ್‌ಶೀಟ್ ಎಂಬುದು ಸದ್ಯದ ಪ್ರಶ್ನೆ. ಅಂತೂ ಅಂಬರೀಶ್ ಅವರು ಚಿತ್ರದ ಮೊದಲಾರ್ಧ ನೋಡಿ ‘ಬದುಕ್ತಿಯಾ ಹೋಗು ’ ಎಂದು ಅಭಿಗೆ ಹೇಳಿದ ಮಾತು ಸತ್ಯವಾಗಿದಂತಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!