ಬೆಂಗಳೂರಿನ ಶ್ರೀರಾಮ ಚಂದ್ರನ ವಿಗ್ರಹ ಅಯೋಧ್ಯೆ ಸಂಶೋಧನಾ ಸಂಸ್ಥೆಯಲ್ಲಿ ಅನಾವರಣ..!

ಅಯೋಧ್ಯೆ: ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಕಾವೇರಿ ಎಂಪೋರಿಯಂನಲ್ಲಿ ಖರೀದಿಸಲಾದ ಶ್ರೀರಾಮ ಚಂದ್ರನ ವಿಗ್ರಹವನ್ನು ಅಯೋಧ್ಯೆ ಸಂಶೋಧನಾ ಸಂಸ್ಥೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ.

35 ಲಕ್ಷ ರು. ಮೌಲ್ಯದ ಈ ವಿಗ್ರಹ 7 ಅಡಿ ಎತ್ತರವಿದೆ. ತೇಗದ ಮರದಲ್ಲಿ ಕೆತ್ತಲಾಗಿದೆ. ರಾವಣನನ್ನು ಕೊಲ್ಲಲು ಬಳಸಿದ್ದ ಕೋದಂಡ ಬಿಲ್ಲನ್ನು ಶ್ರೀರಾಮ ಹಿಡಿದು ನಿಂತಿರುವ ಭಂಗಿಯ ಮೂರ್ತಿ ಇದಾಗಿದೆ.

ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಈ ಭಂಗಿಯ ಮೂರ್ತಿ ನೋಡಿದ್ದೆವು. ಅದೇ ರೀತಿಯ ಮೂರ್ತಿ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದೆವು. ಮೂರು ವರ್ಷಗಳ ಬಳಿಕ ಈ ಮೂರ್ತಿ ಸಿದ್ಧವಾಗಿದೆ ಎಂದು ಅಯೋಧ್ಯೆ ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ ರಾಮ ತೀರಥ್‌ ಅವರು ತಿಳಿಸಿದ್ದಾರೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪುರಸ್ಕೃತ ಎಚ್‌. ಮೂರ್ತಿ ಅವರು ಈ ಮೂರ್ತಿಯನ್ನು ಕೆತ್ತಿಕೊಟ್ಟಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!