ಕುಡಿದ ಅಮಲಿನಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಕೊಳ್ಳೇಗಾಲ : ಮೆಟ್ಟಿಲು ಹತ್ತುವಾಗ ಆಯತಪ್ಪಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಯುವಕನೋರ್ವ ಮೃತಪಟ್ಟಿದ ಘಟನೆ ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಗುರುವಾರ ನಡೆದಿದೆ.

ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದ ನಿವಾಸಿ ಮಲ್ಲೇಶ್(32) ಎಂಬಾತ ಮೃತಪಟ್ಟ ಯುವಕ. ಈತ ಸತ್ತೇಗಾಲ ಗ್ರಾಮದಲ್ಲಿರುವ ತನ್ನ ಪತ್ನಿ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಪತ್ನಿ ಮನೆ‌ ಬಹಳ ಚಿಕ್ಕದಾಗಿದ್ದ ಕಾರಣದಿಂದ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಮನೆಯ ಮೇಲೆ ಮಲಗಲು ತೆರಳುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ‌. ಮೃತ ಮಲ್ಲೇಶ್ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು ಅದೇ ಅಮಲಿನಲ್ಲಿ ಕಾಲು ಜಾರಿಬಿದ್ದು ಗಾಯಗೊಂಡಿದ್ದನು ಎನ್ನಲಾಗಿದೆ. ಈತನನ್ನು ಚಿಕಿತ್ಸೆ ಕೊಡಿಸಲು ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಕೊನೆಯುಸಿರೆಳೆದಿದ್ದಾನೆ.

ಘಟನೆ ಕುರಿತು ಮೃತನ ಪತ್ನಿ ಭಾಗ್ಯಮ್ಮ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿ.ಸಿ.ವನರಾಜು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!