ಜಿಂದಾಲ್ ಜೊತೆ ವ್ಯವಹಾರ ಕುದುರಿಸಿಕೊಳ್ಳಲು ಮುಂದಾಗಿರೊ ಸಿಎಂ-ಯಡಿಯೂರಪ್ಪ

ಹುಬ್ಬಳ್ಳಿ : ಬೇರೆ ಕೈಗಾರಿಕೆಗಳಿಗೆ ಪ್ರೋತ್ಸಾಹ ಮಾಡಬಹುದು, ಆದರೆ ಒಂದು ಕಂಪೆನಿಗೆ ಪವರ್ ಮಾಡಲು ವ್ಯವಹಾರ ಕುದುರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಹೊರಟಿದ್ದಾರೆ, ಕುಮಾರಸ್ವಾಮಿ ನಿರ್ಧಾರ ಖಂಡಿಸಿ 3 ದಿನ ಧರಣಿ ಹೂಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.    

ಹುಬ್ಬಳ್ಳಿಯಲ್ಲಿ ಇಂದು ಹೇಳಿಕೆ ನೀಡಿದ ಅವರು ಇಂದಿನಿಂದ ಮೂರು ದಿನ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದೇನೆ. ಜಿಂದಾಲ್‌ಗೆ ಕೊಡುತ್ತಿರುವ ಜಮೀನಿನಲ್ಲಿ ಉತ್ತಮ ಖನಿಜಗಳಿವೆ. ಈಗಾಗಲೇ ಜಿಂದಾಲ್‌ಗೆ ಕೊಟ್ಟಿರುವ ಭೂಮಿ ಸಫಿಶಿಯಂಟ್ ಆಗಿದೆ, ಮತ್ತೆ ಜಮೀನು ಕೊಡುವ ಅವಶ್ಯಕತೆಯಿಲ್ಲ. ಬೇರೆ ಇಂಡಸ್ಟ್ರೀಜ್‌ಗೆ ಪ್ರೋತ್ಸಾಹ ಮಾಡಬಹುದು. ಯಾವುದೋ ಒಂದು ಕಂಪನಿಗೆ ಪವರ್ ಮಾಡಲು ವ್ಯವಹಾರ ಕುದುರಿಸಿಕೊಳ್ಳಲು ಕುಮಾರಸ್ವಾಮಿ ಹೊರಟಿದ್ದಾರೆ. ಸಿಎಂ ಕುಮಾರಸ್ಚಾಮಿ ನಿರ್ಧಾರ ಖಂಡಿಸಿ ಮೂರು ದಿನ ಧರಣಿ ಮಾಡುತ್ತೇವೆ ಎಂದರು.

ಇದೇ ವೇಳೆ ಸಿಎಂ ಗ್ರಾಮ ವಾಸ್ತವ್ಯಕ್ಕೆ ಅರ್ಥವಿಲ್ಲ. ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಸೂಕ್ತ ಅನುದಾನ ಕೊಟ್ಟಿಲ್ಲ. ಅದನ್ನು ಬಿಟ್ಟು ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ. ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ದೊಂಬರಾಟವಿದು. ರಾಜ್ಯದ ಜನ ಇದಕ್ಕೆಲ್ಲ ಬೆಲೆ ಕೊಡಲ್ಲ‌. ಜನರನ್ನು ವಂಚಿಸಿ ಪರಸ್ಪರ ಕಚ್ಚಾಟ,ಬಡಿದಾಟದಲ್ಲಿ ತೊಡಗಿದ್ದಾರೆ. ಕುಮಾರಸ್ವಾಮಿಯವರ ಮಗ ಯಾವುದೇ ಸಂದರ್ಭದಲ್ಲಾದರೂ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ. ನಾನು ಹೇಳುತ್ತೇನೆ ಯಾವುದೇ ಕಾರಣಕ್ಕೂ ಚುನಾವಣೆ ನಡೆಯಲ್ಲ. ಅಧಿಕಾರ‌‌ ಮಾಡಲು ಆದರೆ ಮಾಡಲಿ, ಆಗದಿದ್ದರೆ ಬಿಟ್ಟು ಹೋಗಲಿ. ನಮಗೆ ಬಿಟ್ಟು ಕೊಡಲಿ ನಾವು ಅಧಿಕಾರ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಹೊಸ ಚುನಾವಣೆಗೆ ಹೋಗುವ ಪ್ರಶ್ನೆಯಿಲ್ಲ. ನಾವು ಅದನ್ನು ಒಪ್ಪಲ್ಲ. ಜನರ ಬಳಿ ಹೋಗಲು ಇನ್ನೂ 5 ವರ್ಷ ಬಾಕಿಯಿದೆ. ಈ ಸರ್ಕಾರ ಬಹಳ ದಿನ ಇರುತ್ತೆ ಅಂತ ಯಾರಿಗೂ ವಿಶ್ವಾಸವಿಲ್ಲ. ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅವಕಾಶ ಕೊಡುವುದು ಪ್ರಧಾನಿಗಳಿಗೆ ಬಿಟ್ಟ ವಿಚಾರ ಎಂದರು.

ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬಿಜೆಪಿ ಸೇರ್ಪಡೆ ವಿಚಾರ ಬಗ್ಗೆ ಪ್ರಶ್ನೆ ಕೇಳಿದಾಗ ನಾವು ಸುಮಲತಾ ಅವರನ್ನು ಅಪ್ರೋಚ್ ಮಾಡಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.

Share Post

Leave a Reply

Your email address will not be published. Required fields are marked *

error: Content is protected !!