ಚಾಲಕನ ನಿಯಂತ್ರಣ ತಪ್ಪಿ ಪೊದೆಯೊಳಗೆ ನುಗ್ಗಿದ ಬಸ್:ಅಪಘಾತದಿಂದ ಪ್ರಯಾಣಿಕರು ಪಾರು..!

ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಪೊದೆಯೊಳಗೆ ನುಗ್ಗಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕರಿಗಳ ಗ್ರಾಮದ ಬಳಿ ನಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ಸರಗೂರಿಗೆ ಬಸ್ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಬಸ್‌ ಚಲಿಸುತ್ತಿದ್ದ ವೇಳೆ ರಾಸುಗಳು ಅಡ್ಡ ಬಂದಿದ್ದರಿಂದ ಬಸ್ ಚಾಲಕ ಡಿಕ್ಕಿ ತಪ್ಪಿಸಲು ಯತ್ನಿಸಿದ್ದಾರೆ. ಆಗ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪೊದೆಯೊಳಗೆ ನುಗ್ಗಿದೆ. ಪಲ್ಟಿ ಹೊಡೆಯಬೇಕಿದ್ದ ಬಸ್‌ ಮರದ ಆಸರೆಯಿಂದ ನಿಂತಿದ್ದು, ಭಾರೀ ಅನಾಹುತ ತಪ್ಪಿದೆ. ಸದ್ಯ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!