ಕೆರೆ ಹೂಳು ಎತ್ತುವಾಗ ಕೂಲಿಕಾರ್ಮಿಕ ಸಾವು

ರಾಯಚೂರು : ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೂವಿನಭಾವಿ ಗ್ರಾಮದ ಕೆರೆಯಲ್ಲಿ ಹೂಳು ಎತ್ತುವ ಕೆಲಸದಲ್ಲಿ ನಿರತರಾಗಿದ್ದ ಕೂಲಿಕಾರ್ಮಿಕನೊಬ್ಬಸಾವನ್ನಪ್ಪಿದ್ದಾನನೆ.

ಮೃತಪಟ್ಟ ಕೂಲಿಕಾರ್ಮಿಕನನ್ನು ರಾಮಪ್ಪ (35) ಎಂದು ಗುರುತಿಸಲಾಗಿದೆ. ‌ನರೇಗಾ ಯೋಜನೆ ಅಡಿಯಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ ನಡೆಸಲಾಗುತ್ತಿತ್ತು.  ಸೋಮವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಅಂಕುಶದೊಡ್ಡಿ ಗ್ರಾಮದ ರಾಮಪ್ಪ ಕೆಲಸ ಮಾಡುತ್ತಿರುವಾಗಲೇ ಕುಸಿದುಬಿದ್ದಿದ್ದಾರೆ, ಕೂಡಲೇ ಪ್ರಥಮ ಚಿಕಿತ್ಸೆಗಾಗಿ  ಲಿಂಗಸುಗೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ರಾಮಪ್ಪ ಸೋಮವಾರ ರಾತ್ರಿ 8 ಗಂಟೆಗೆ ಮೃತಪಟ್ಟಿದ್ದಾನೆ.

Share Post

Leave a Reply

Your email address will not be published. Required fields are marked *

error: Content is protected !!