ಕಾರಣವಿಲ್ಲದೆ ಕೆಲಸದಿಂದ ವಜಾ-ಕಾರ್ಮಿಕರ ಉಪವಾಸ ಧರಣಿ

ಕೋಲಾರ : ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ತೆಗದು ಹಾಕಿದ ಹಿನ್ನೆಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರಿಂದ ಕಂಪನಿ ಎದುರು ಪ್ರತಿಭಟನೆ ನಡೆಸಿದ ಘಟನೆ ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ‌ ಮಿಸ್ಟ್ರುಬ್ಯೂಷಿ ಕಂಪನಿ 40ಕ್ಕೂ ಹೆಚ್ಚು ಕಾರ್ಮಿಕರನ್ನು ಕಾರಣ ನೀಡದೆ ಕೆಲಸದಿಂದ ತೆಗೆದು ಹಾಕಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕಂಪನಿಯ ಈ ಕ್ರಮ ಖಂಡಿಸಿ ಉಪವಾಸ ಧರಣಿ ಮಾಡುತ್ತಿರುವ ಕಾರ್ಮಿಕರಲ್ಲಿ ಕೆಲವರು ಅಸ್ವಸ್ಥರಾಗಿದ್ದಾರೆ. ಧರಣಿ ವೇಳೆ ಅಸ್ವಸ್ಥನಾದ ಓರ್ವ ಕಾರ್ಮಿಕ, ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

Share Post

Leave a Reply

Your email address will not be published. Required fields are marked *

error: Content is protected !!