ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ

ಬೆಂಗಳೂರು : ರಾಜ್ಯದ ಮಹತ್ವದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಒಟ್ಟು 1361 ವಾರ್ಡ್ ಗಳ ಪೈಕಿ 1221 ವಾರ್ಡ್ ಗಳ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿ 366 ವಾರ್ಡ್ ಗಳಲ್ಲಿ ಗೆದ್ದಿದೆ. ಕಾಂಗ್ರೆಸ್ 509 ವಾರ್ಡ್ ಗಳಲ್ಲಿ ಜಯಶಾಲಿಯಾಗಿದೆ. ಜೆಡಿಎಸ್ 174 ವಾರ್ಡ್ ಗಳಲ್ಲಿ ಜಯಗಳಿಸಿದೆ. ಬಿಎಸ್ಪಿ 3 ವಾರ್ಡ್ ಗಳಲ್ಲಿ,ಸಿಪಿಐ(ಎಂ) 2 ವಾರ್ಡ್ ಗಳಲ್ಲಿ ಗೆದ್ದಿವೆ. ಪಕ್ಷೇತರರು 160 ವಾರ್ಡ್ ಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇತರರು 7 ವಾರ್ಡ್ ಗಳಲ್ಲಿ ಜಯಿಸಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾವಣೆಯ ಘೋಷಿತ 290 ಸ್ಥಾನಗಳ ಪೈಕಿ ಬಿಜೆಪಿ 126,ಕಾಂಗ್ರೆಸ್ 97,ಜೆಡಿಎಸ್ 34 ಹಾಗು ಇತರರು 33 ವಾರ್ಡ್ ಗಳಲ್ಲಿ ಜಯಗಳಿಸಿದ್ದಾರೆ.

ಪುರಸಭೆಯ 714 ವಾರ್ಡ್ ಗಳಿಗೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 184,ಕಾಂಗ್ರೆಸ್ 322,ಜೆಡಿಎಸ್  102,ಇತರರು 106 ವಾರ್ಡ್ ಗಳಲ್ಲಿ ಗೆದ್ದಿದ್ದಾರೆ.

ನಗರಸಭೆಯ 217 ವಾರ್ಡ್ ಗಳಿಗೂ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಬಿಜೆಪಿ 56,ಕಾಂಗ್ರೆಸ್ 90,ಜೆಡಿಎಸ್ 38 ಹಾಗೂ ಇತರೆ ಅಭ್ಯರ್ಥಿಗಳು 33 ವಾರ್ಡ್ ಗಳಲ್ಲಿ ಜಯಶಾಲಿಗಳಾಗಿದ್ದಾರೆ.    

Share Post

Leave a Reply

Your email address will not be published. Required fields are marked *

error: Content is protected !!