ಹುಬ್ಬಳಿ :ಮಟ್ಕಾ ದಂದೇ ನಡೆಸುತ್ತಿದ್ದ ಬುಕ್ಕಿಗಳ ಬಂಧನ..

ಹುಬ್ಬಳಿ: ಬಾಕಳೆ ಗುಡಿಯ ಕರಿಯಮ್ಮ ದೇವಸ್ಥಾನದ ಮನೆ ಒಳಗಡೆ ದೊಡ್ಡ ಮಟ್ಟದಲ್ಲಿ ಮಟ್ಕಾ ಆಡಿಸುತ್ತಿದ್ದ ಆರೋಪಿಗಳನ್ನು ಸಿ.ಸಿ.ಬಿ ಪೊಲೀಸರು ದಾಳಿ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಬುಕ್ಕಿಗಳನ್ನು ಸೇರಿ ಒಟ್ಟು 12 ಜನ ಆರೋಪಿಗಳನ್ನು ಬಂಧಿಸಿದ್ದಾರೆ ಬಂಧಿತ ಬುಕ್ಕಿಗಳಿಂದ 95.914 ಸಾವಿರ ನಗದು ಹಾಗೂ 25 ಮೊಬೈಲ್ ಳನ್ನು ವಶಪಡಿಸಿಕೊಂಡಿದ್ದಾರೆ. ಬುಕ್ಕಿಗಳಾದ ಸಚಿನ್ ಮಿಸ್ಕಿನ್ ಹಾಗೂ ಅನಿಲ್ ಮಿಸ್ಕಿನ್ ಹಾಗೂ ಇತರೆ ಬಂಧಿತರು ಬಾಂಬೆ ಕಲ್ಯಾಣಿ ಮುಂಬೈ ಪೇಟೆ ಎಂಬ ಮಟ್ಕಾ ಹೆಸರಿನಲ್ಲಿ ಸಾರ್ವಜನಿಕರಿಂದ 1 ರೂಪಾಯಿಗೆ 90 ರೂಪಾಯಿ ಕೊಡುವದಾಗಿ ಮಟ್ಕಾವನ್ನು ಅಡಿಸುತ್ತಿದ್ದರು. ಇನ್ನು ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸಿಪಿ ಎಸ್.ಬಿ ಕಟ್ಟಿಮನಿ ಹಾಗೂ ಸಿಸಿಬಿ ಇನ್ಸ್ ಪೆಕರ್ ವಿನೋದ ಮುಕ್ತೇದಾರ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿ ಸಚಿನ ಮಿಸ್ಕಿನ ನನ್ನು ಗಡಿಪಾರು ಮಾಡುವಂತೆ ಆದೇಶವನ್ನು ಕಮೀಷನರ್ ಎಂ.ಎನ್ ನಾಗರಾಜ್ ಹೊರಡಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!