ಪೊಲೀಸರ ಮೇಲೆಯೇ ಬಂಧಿತ ರೌಡಿಯಿಂದ ಫೈರಿಂಗ್-ಆರೋಪಿ ಅರೆಸ್ಟ್

ಮಂಗಳೂರು : ಮಂಗಳೂರಿನ ಪಚ್ಚನಾಡಿಯಲ್ಲಿ ಉಮರ್ ಫಾರೂಕ್ ಎಂಬ ರೌಡಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಘಟನೆ ನಡೆದಿದೆ. ಗುಂಡಿನ ದಾಳಿ ಮಾಡಿ ಪೊಲೀಸರ ಮೇಲೆ ಉಮರ್ ಫಾರೂಕ್ ಹಲ್ಲೆ ಮಾಡಿದ್ದಾನೆ. ಪರಿಣಾಮ ಪೊಲೀಸ್ ಕಾನ್ಸ್ ಟೇಬಲ್ ಸಂದೀಪ್ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ಧಾರೆ. ತಕ್ಷಣ ಆರೋಪಿಯ ಮೇಲೆ ಗುಂಡಿನ ದಾಳಿ ಮಾಡಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಬಾವ ರೌಡಿ ಟಾರ್ಗೆಟ್ ಇಲ್ಯಾಸ್ ಹಂತಕ ಶಮೀರ್ ಹತ್ಯೆಗೆ ಉಮರ್ ಫಾರೂಕ್ ಪಿತೂರಿ ನಡೆಸಿದ್ದ. ಅಲ್ಲದೆ ಇತರ ಇನ್ನೂ ಎರಡು ಪ್ರಕರಣದಲ್ಲಿ ಉಮರ್ ಫಾರೂಕ್ ಪೊಲೀಸರಿಗೆ ಬೇಕಾಗಿದ್ದ.
