ತಬು, ಸೈಫ್, ನೀಲಂ, ಸೋನಾಲಿಗೆ ಕೋರ್ಟಿನಿಂದ ನೋಟಿಸ್

ಜೋಧ್ ಪುರ್: ಬಾಲಿವುಡ್ಡಿನ ಸ್ಟಾರ್ ನಟ, ನಟಿಯರನ್ನು 1998ರ ಕೃಷ್ಣಮೃಗ ಬೇಟೆ ಪ್ರಕರಣ ಇನ್ನಿಲ್ಲದ್ದಂತೆ ಕಾಡುತ್ತಿದೆ. ಸಲ್ಮಾನ್ ಖಾನ್ ಅವರು ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದ ಸಹ ಆರೋಪಿಗಳಿಗೆ ರಾಜಸ್ಥಾನದ ಹೈಕೋರ್ಟಿನಿಂದ (ಮೇ 20)ದಂದು ಹೊಸದಾಗಿ ನೋಟಿಸ್ ಜಾರಿ ಮಾಡಲಾಗಿದೆ.

ಮುಖ್ಯ ಆರೋಪಿಯ ಜತೆ ಘಟನಾ ಸ್ಥಳದಲ್ಲಿದ್ದ ಕಾರಣಕ್ಕೆ ಆರೋಪ ಹೊತ್ತಿದ್ದ ಹಮ್ ಸಾಥ್ ಸಾಥ್ ಹೈ ಚಿತ್ರ ತಂಡದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಕುಮಾರ್ ಅವರು ಸಹ ಆರೋಪಿಗಳಾಗಿದ್ದರು.

ಆದರೆ, ಐದು ತಿಂಗಳ ಹಿಂದೆ ಇವರೆಲ್ಲರ ವಿರುದ್ಧ ಸರಿಯಾದ ಸಾಕ್ಷಿ ಸಿಗದ ಕಾರಣ, ಪ್ರಕರಣದಿಂದ ಖುಲಾಸೆಗೊಂಡಿದ್ದರು. ನಟ, ನಟಿಯರನ್ನು ಕೇಸಿನಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ, ರಾಜಸ್ಥಾನ ಸರ್ಕಾರವು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.

Share Post

Leave a Reply

Your email address will not be published. Required fields are marked *

error: Content is protected !!