ಮಗುವಿನ ಮೇಲೆ ಬೀದಿನಾಯಿಗಳ ದಾಳಿ!

ಬೆಳಗಾವಿ: ಆರು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಗಂಭೀರ ಗಾಯಗಳಿಂದ ಮಗು ಬಳಲುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಪಂತ ಬಾಳೆಕುಂದ್ರಿಯಲ್ಲಿ ನಡೆದಿದೆ ಬೆಳಗಾವಿ ಜಿಲ್ಲೆಯ ಪಂಥಬಾಳೆ ಕುಂದ್ರಿ ಗ್ರಾಮದ ಅಂಬೇಡ್ಕರ ಗಲ್ಲಿಯ ಆರು ವರ್ಷದ ಸೋಹಮ ಹೊನ್ನಪ್ಪಾ ಮೇತ್ರಿ ಎಂಬ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಬಾಲಕನಿಗೆ ಗಂಭೀರ ಗಾಯಗಳಾಗಿವೆ. ತಲೆ, ಕತ್ತು, ಕೈ ಸೇರಿದಂತೆ ದೇಹದ ವಿವಿದ ಬಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು ಕೆಎಲ್ಇ ಆಸ್ಪತ್ರೆಯ ತೀವ್ರ ನೀಗಾ ಘಟಕದಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ನವೆಂಬರನಲ್ಲಿ ಅಬ್ಬಾಸ ಅಲಿ ಎಂಬ ಎರಡು ವರ್ಷದ ಮಗುವಿನ ಮೇಲೂ ದಾಳಿಯಾಗಿತ್ತು ಪಂಥ ಬಾಳೆ ಕುಂದ್ರಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇಂತಹ ಅಪಾಯಕಾರಿ ಘಟನೆಗಳ ಸಂಖ್ಯೆ ಹೆಚ್ಚುವ ಮೊದಲುಅಧಿಕಾರಿಗಳು ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.

Share Post

Leave a Reply

Your email address will not be published. Required fields are marked *

error: Content is protected !!