ಶಾಸಕಿ ಕಾರು ಅಪಘಾತ, ಪುಟ್ಟ ಬಾಲಕಿ ದುರ್ಮರಣ

ತೆಲಂಗಾಣ: ಶಾಸಕಿಯೊಬ್ಬರ ಕಾರು ಹರಿದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯ ಜೀಡಿವಾಗುನಲ್ಲಿ ನಡೆದಿದೆ. ತೆಲಂಗಾಣ ಶಾಸಕಿ ದಾನಸರಿ ಅನುಸೂಯ ಅಲಿಯಾಸ್ ಸೀತಮ್ಮ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಗುವಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

Share Post

Leave a Reply

Your email address will not be published. Required fields are marked *

error: Content is protected !!